ಹುಬ್ಬಳ್ಳಿ : ಲೋಕಸಭಾ ಚುನಾವಣೆ ಹೊತ್ತಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ ಎದುರಾಗಿದ್ದು ಪರಿಷತ್ ಸದಸ್ತ್ವಕ್ಕೆ ಜೆಡಿಎಸ್ ಮರಿತಿಬ್ಬೇಗೌಡ ಅವರು ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಇಂದು ಜೆಡಿಎಸ್ ಗೆ ಮರಿತಿಬ್ಬೆಗೌಡ ರಾಜೀನಾಮೆ ನೀಡಲಿದ್ದು, ಪರಿಷತ್ ಸದಸ್ಯತ್ವಕ್ಕೆ ಮರೀತೀಬ್ಬೆಗೌಡ ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಮಧ್ಯಾಹ್ನ 12 ಗಂಟೆಗೆ ಸಭಾಪತಿ ಬಸವರಾಜ್ ಹೊರಟ್ಟಿಗೆ ಇವರು ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹುಬ್ಬಳ್ಳಿಯ ಬಸವರಾಜ್ ಹೊರಟ್ಟಿ ಗೃಹ ಕಚೇರಿಯಲ್ಲಿ ಮರೀತೀಬ್ಬೆಗೌಡ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್ ತೊರೆದು ಬಹುಶಹ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.