ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಇಸ್ರೇಲ್ ಸೇನೆಯು ಕನಿಷ್ಠ 90 ಬಂದೂಕುಧಾರಿಗಳನ್ನು ಕೊಂದಿದೆ ಮತ್ತು ಸುಮಾರು 160 ಜನರನ್ನು ಬಂಧಿಸಿದೆ ಎಂದು ಹೇಳಿದೆ.
ಆದರೆ ಗಾಝಾದಲ್ಲಿನ ಹಮಾಸ್ ನೇತೃತ್ವದ ಸರ್ಕಾರವು ಈ ಹೇಳಿಕೆಯನ್ನು ನಿರಾಕರಿಸಿದ್ದು, ಸಾವನ್ನಪ್ಪಿದವರು ಗಾಯಗೊಂಡ ರೋಗಿಗಳು ಮತ್ತು ಆಸ್ಪತ್ರೆಯೊಳಗೆ ಸ್ಥಳಾಂತರಗೊಂಡ ವ್ಯಕ್ತಿಗಳು ಎಂದು ಹೇಳಿದೆ.
ಯುದ್ಧಕ್ಕೆ ಮುಂಚಿತವಾಗಿ ಗಾಝಾ ಪಟ್ಟಿಯ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾ, ಈಗ ಪ್ರದೇಶದ ಉತ್ತರದಲ್ಲಿ ಭಾಗಶಃ ಕಾರ್ಯನಿರ್ವಹಿಸುತ್ತಿರುವ ಕೆಲವೇ ಆರೋಗ್ಯ ಸೌಲಭ್ಯಗಳಲ್ಲಿ ಒಂದಾಗಿದೆ ಮತ್ತು ಸ್ಥಳಾಂತರಗೊಂಡ ನಾಗರಿಕರಿಗೆ ಆಶ್ರಯ ನೀಡುತ್ತಿದೆ.
ಕಳೆದ ಒಂದು ದಿನದಿಂದ, ಸೈನಿಕರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದಾರೆ ಮತ್ತು ಆಸ್ಪತ್ರೆ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದ್ದಾರೆ, ಆದರೆ ನಾಗರಿಕರು, ರೋಗಿಗಳು, ವೈದ್ಯಕೀಯ ತಂಡಗಳು ಮತ್ತು ವೈದ್ಯಕೀಯ ಉಪಕರಣಗಳಿಗೆ ಹಾನಿಯಾಗುವುದನ್ನು ತಡೆಗಟ್ಟಿದ್ದಾರೆ” ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.a