ಟೋಕಿಯೊ: ಪೂರ್ವ ಜಪಾನ್ನಲ್ಲಿ 5.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಎನ್ಎಚ್ಕೆ ನ್ಯೂಸ್ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಬೆಳಿಗ್ಗೆ 9:08 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ದಕ್ಷಿಣ ಇಬಾರಾಕಿ ಪ್ರಿಫೆಕ್ಚರ್ನಲ್ಲಿ ಸುಮಾರು 50 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಇನ್ನು ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲೂ ಭೂಕಂಪನಗಳು ಸಂಭವಿಸಿವೆ. ಬುಧವಾರ ತಡರಾತ್ರಿ ಭಾರತದ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪನಗಳು ಸಂಭವಿಸಿದ್ರೆ, ಇಂದು ಬೆಳಗ್ಗೆ ಮಹಾರಾಷ್ಟ್ರದಲ್ಲೂ ಎರಡು ಭೂಕಂಪನಗಳು ದಾಖಲಾಗಿವೆ.