ವಿಜಯಪುರ : ವಿವಾಹಿತ ಮಹಿಳೆಯೊಂದಿಗೆ ವ್ಯಕ್ತಿ ಒಬ್ಬ ಅನೈತಿಕ ಸಂಬಂಧ ಹೊಂದಿದ್ದ ಎಂದು ಸಂಕಿಸಿ ಅವರಿಬ್ಬರೂ ಹೊಲದಲ್ಲಿಯೇ ಇರುವಾಗ ದುಷ್ಕರ್ಮಿಗಳು ಅವರನ್ನು ಭೀಕರವಾಗಿ ಕೊಲೆಗೈದು ಪರಾರಿ ಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ನಡೆದಿದೆ.
ಬೆಂಗಳೂರಲ್ಲಿ 3 ಜನ ಆತ್ಮಹತ್ಯೆ ಕೇಸ್ ಗೆ ‘ಬಿಗ್ ಟ್ವಿಸ್ಟ್’ : ವಿದ್ಯುತ್ ಶಾಕ್ ನಿಂದ ಸಾವು ಎಂದು ತನಿಖೆ ವೇಳೆ ಬಹಿರಂಗ
ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಜೋಡಿ ಕೊಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ನಡೆದಿದೆ. ತಾಲೂಕಿನ ಗಣಿ ಗ್ರಾಮದ ನಿವಾಸಿಗಳಾದ ಕಲ್ಲಪ್ಪ ಕುಂಬಾರ(35) ಪಾರ್ವತಿ ತಳವಾರ(38) ಕೊಲೆಯಾದವರು.
ಲೋಕಸಭಾ ಚುನಾವಣೆ: ಯಾರಿಗೆಲ್ಲ ‘ಅಂಚೆ ಮತದಾನ’ಕ್ಕೆ ಅವಕಾಶ.? ಇಲ್ಲಿದೆ ಡೀಟೆಲ್ಸ್
ವಿವಾಹಿತೆ ಪಾರ್ವತಿ ಹಾಗೂ ಕಲ್ಲಪ್ಪ ಮಧ್ಯೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಮಾರಡಗಿ ತಾಂಡಾದ ಬಳಿಯ ಜಮೀನೊಂದರಲ್ಲಿ ಪಾರ್ವತಿ ಹಾಗೂ ಕಲ್ಲಪ್ಪ ಇಬ್ಬರೂ ಒಟ್ಟಿಗೆ ಇದ್ದಾಗ ಕೊಲೆ ನಡೆದಿದೆ. ಕೊಲೆ ಮಾಡಿದ ಬಳಿಕ ಶವದ ಮೇಲೆ ಮುಳ್ಳುಕಂಟಿ ಹಾಕಿ ಕೊಲೆಗಾರರು ಪರಾರಿಯಾಗಿದ್ದಾರೆ.
ಬೆಂಗಳೂರಲ್ಲಿ ನಾಯಿ ಬೊಗಳಿದೆ ಅಂತ ‘ನಟಿ ಅನಿತಾ ಭಟ್’ ಜೊತೆ ಕಿಡಿಗೇಡಿಗಳ ಕಿರಿಕ್: ಕೇಸ್ ದಾಖಲು
ಮನೆಯ ಕಡೆಯವರು ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆಯ ಸಿಪಿಐ ಶರಣಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರಿಂದ ತನಿಖೆ ಮುಂದಿವರೆದಿದ್ದು, ಕೊಲೆಗಾರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.