ಪ್ರಯಾಗ್ ರಾಜ್: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಗಳ ಸಾವಿನ ಪ್ರತಿಕಾರ ತೀರಿಸಿಕೊಳ್ಳಲು ಕುಟುಂಬಸ್ಥರು ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಮೃತ ಮಹಿಳೆಯ ಪೋಷಕರು ಆಕೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಅನ್ಶಿಕಾ ಕೇಸರ್ವಾನಿ ಎಂಬ ಮೃತ ಮಹಿಳೆಯ ಪೋಷಕರು ತನ್ನ ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು ತಿಳಿಸಿದ್ದಾರೆ.
Tragic incident in Prayagraj as parents of deceased woman, Anshika Kesarwani, set fire to her in-laws' house.
Mother-in-law Shobha Devi and father-in-law Rajendra Kesarwani perish in the blaze, Police rescue 5.
In-laws accused in daughter-in-law's suspicious death.… pic.twitter.com/s4ElcyjQwJ
— Mohd Shadab Khan (@Shadab_VAHIndia) March 19, 2024
ದುರಂತದಲ್ಲಿ ಇಬ್ಬರು ಜನರು ಸುಟ್ಟುಹೋಗಿದ್ದರೆ, ಪೊಲೀಸರು ಕುಟುಂಬದ ಐದು ಜನರನ್ನು “ಉರಿಯುತ್ತಿರುವ ಮನೆ” ಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತರನ್ನು ಅತ್ತೆ ಶೋಭಾ ದೇವಿ ಮತ್ತು ಮಾವ ರಾಜೇಂದ್ರ ಕೇಸರ್ವಾನಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಅನ್ಶಿಕಾ ಕೇಸರ್ವಾನಿ ಅವರ ಅಳಿಯಂದಿರು ತಮ್ಮ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
UP : प्रयागराज में बड़ी घटना। महिला अंशिका केसरवानी की संदिग्ध मौत के बाद मायकेवालों ने ससुराल के घर में आग लगाई। सास शोभा देवी और ससुर राजेंद्र केसरवानी की जिंदा जलकर मौत हुई। 5 लोगों को पुलिस ने रेस्क्यू किया। ससुरालवालों पर बहू की हत्या करने का आरोप था। pic.twitter.com/ZJdz0ITwLG
— Sachin Gupta (@SachinGuptaUP) March 19, 2024