ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲು ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಫಿಟ್ ಎಂದು ಘೋಷಿಸಲಾಗಿದೆ.
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲುತ್ತಿದ್ದ ರಾಹುಲ್ ಇಂಗ್ಲೆಂಡ್ ವಿರುದ್ಧದ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.
ರಾಹುಲ್ ತಮ್ಮ ಗಾಯದ ಬಗ್ಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಲಂಡನ್ ಗೆ ಹೋಗಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಎಲ್ಎಸ್ ಜಿ ನಾಯಕ ಐಪಿಎಲ್ ನಲ್ಲಿ ಆಡಲು ಫಿಟ್ ಎಂದು ಘೋಷಿಸಲಾಗಿದೆ.
ಏತನ್ಮಧ್ಯೆ, ಕೆಲವು ದಿನಗಳ ಹಿಂದೆ ರಾಹುಲ್ ಇನ್ಸ್ಟಾಗ್ರಾಮ್ನಲ್ಲಿ ಸಣ್ಣ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು ಬ್ಯಾಟಿಂಗ್, ಬೇಸಿಕ್ ಕೀಪಿಂಗ್ ಡ್ರಿಲ್ ಮತ್ತು ಎನ್ಸಿಎಯಲ್ಲಿ ಔಟ್ಫೀಲ್ಡಿಂಗ್ ಅಭ್ಯಾಸವನ್ನು ಮಾಡುವುದನ್ನು ಕಾಣಬಹುದು.