ಬೆಂಗಳೂರು : ಬೆಂಗಳೂರಿನ ಬೆಳ್ಳಂದೂರಿನ ಶಾಲೆಯ ಆವರಣದಲ್ಲಿ ಭಾರೀ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಳ್ಳಂದೂರಿನ ಶಾಲೆಯ ಮುಂಭಾಗದ ಖಾಲಿ ಜಾಗದಲ್ಲಿ ಜಿಲಿಟಿನ್ ಕಡ್ಡಿ, ಡಿಟೋನೇಟರ್ ಸೇರಿದಂತೆ ಹಲವು ಸ್ಪೋಟಕ ವಸ್ತುಗಳು ಪತ್ತೆಯಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನೀಡಲಾಗಿದ್ದು, ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.