ಬೆಳಗಾವಿ : ಕೇವಲ 30 ಗುಂಟೆ ಜಮೀನಿಗಾಗಿ ಅಳಿಯ ಹಾಗೂ ಮಾವನ ನಡುವೆ ಗಲಾಟೆ ಏರ್ಪಟ್ಟಿದ್ದು, ಈ ವೇಳೆ ಮಾವ ಅಳಿಯನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಬಳಿ ಕೃತ್ಯ ನಡೆದಿದೆ.
‘ಭಾರತೀಯ ಒಲಿಂಪಿಕ್ ಅಸೋಸಿಯೇಷನ್’ನಿಂದ ‘ಎಡಿ ಎಚ್ಒಸಿ ಕುಸ್ತಿ ಸಮಿತಿ’ ವಿಸರ್ಜನೆ
ಆಸ್ತಿ ವಿವಾದ ಹಿನೆಲೆಯಲ್ಲಿ ಅಳಿಯನ ಮೇಲೆ ಮಾವ ಗುಂಡಿನ ದಾಳಿ ನಡೆಸಲಾಗಿದೆ. 38 ಜಮೀನಿಗಾಗಿ ಶಾಂತಿನಾಥ ಅಲಗೂರು ಗುಂಡಿನ ದಾಳಿ ನಡೆಸಲಾಗಿದೆ ಶಾಂತಿನಾಥ (32) ಮೇಲೆ ಮಾವ ಧನಪಾಲ ಆಸಂಗಿ (54) ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದೆ.
BREAKING : ಹಾಸನ, ಕೋಲಾರ, ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ : ಎಚ್ ಡಿ ಕುಮಾರಸ್ವಾಮಿ ಘೋಷಣೆ
ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ದಿಂದಲೇ ಒಂದು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ ಧನಪಾಲ್. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿ ಧನಪಾಲ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
BREAKING: ‘ರಾಮಾಪುರ ಪ್ರಕರಣ’ದಲ್ಲಿ ಬಿಹಾರದ ‘ಮಾಜಿ ಸಚಿವ ಅಜಂ ಖಾನ್’ಗೆ 7 ವರ್ಷ ಜೈಲು ಶಿಕ್ಷೆ
ಹೊಟ್ಟೆ ಭಾಗಕ್ಕೆ ಗುಂಡು ತಾಗಿದ್ದು, ಶಾಂತಿನಾಥ್ ಸ್ಥಿತಿ ಗಂಭೀರವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯ ಹಿನ್ನೆಲೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.