ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚೆಗೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ಗಾಮಿನಿ 5 ಅಲ್ಲ 6 ಮರಿಗಳಿಗೆ ಜನ್ಮ ನೀಡಿತ್ತು. ಮಾರ್ಚ್ 10 ರಂದು ಮರಿಗಳ ಸಂಖ್ಯೆ 5 ಎಂದು ವರದಿಯಾಗಿತ್ತು. ಆದ್ರೆ, ಇಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಚೀತಾ ಮರಿಗಳ ವೀಡಿಯೋವನ್ನ ಹಂಚಿಕೊಂಡಿದ್ದು, ಅವು ಆರಿವೆ. ಇದರ ಜತೆಗೆ 6 ಮರಿಗಳಿಗೆ ಜನ್ಮ ನೀಡಿದ ದಾಖಲೆಯೂ ಗಾಮಿನಿ ಹೆಸರಿನಲ್ಲಿ ದಾಖಲಾಗಿದೆ. ಹೆಣ್ಣು ಚೀತಾ ಗಾಮಿನಿಯನ್ನ ದಕ್ಷಿಣ ಆಫ್ರಿಕಾದಿಂದ ತರಲಾಗಿದೆ.
ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, “ತುಂಬಾ ಸಂತೋಷವಾಗಿದೆ. ಇವು ಐದಲ್ಲ, ಆರು ಮರಿಗಳು! “ಗಾಮಿನಿ ಐದು ಮರಿಗಳಿಗೆ ಜನ್ಮ ನೀಡಿದ ಒಂದು ವಾರದ ನಂತರ ಮತ್ತೊಂದು ಮರಿಗೆ ಜನ್ಮ ನೀಡಿರುವುದು ಇದೀಗ ದೃಢಪಟ್ಟಿದೆ. ಇದು ಮೊದಲ ಬಾರಿಗೆ ಈ ರೀತಿಯ ದಾಖಲೆ ನಿರ್ಮಾಣಾಗಿದೆ. ಮೊದಲ ಬಾರಿಗೆ ತಾಯಿಯಾದ ಗಾಮಿನಿ 6 ಮರಿಗಳಿಗೆ ಜನ್ಮ ನೀಡಿದ ಮೊದಲ ಹೆಣ್ಣು ಚಿರತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ”. ಇಲ್ಲಿಯವರೆಗೆ ಗರಿಷ್ಠ ಸಂಖ್ಯೆ 5 ಮಾತ್ರ.
#WATCH | A week after the news of five cubs born to Gamini, it is now confirmed that Gamini, the South African cheetah mother, has given birth to six cubs, a record of sorts for a first-time mother.
Union Environment Minister Bhupender Yadav shares the video on his 'X' handle. pic.twitter.com/IATISP2na0
— ANI (@ANI) March 18, 2024
ಭಾರತದಲ್ಲಿ ಚಿರತೆಗಳನ್ನ ಸ್ಥಿರಗೊಳಿಸಲು ಪ್ರಾಜೆಕ್ಟ್ ಚೀತಾವನ್ನ ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 2 ಹಂತಗಳಲ್ಲಿ 20 ಚಿರತೆಗಳನ್ನ ತರಲಾಯಿತು. ಈ ಪೈಕಿ 7 ಚಿರತೆಗಳು ಸಾವನ್ನಪ್ಪಿವೆ. ಏತನ್ಮಧ್ಯೆ, ಕುನೋದಲ್ಲಿ ಜನಿಸಿದ 13 ಮಕ್ಕಳು ಮೃತಪಟ್ಟವು. ಕುನೋದಲ್ಲಿ ಈಗ ಒಟ್ಟು ಚಿರತೆಗಳ ಸಂಖ್ಯೆ 27 ಆಗಿದೆ. ಗಾಮಿನಿಯ ಮರಿಗಳು ಹುಟ್ಟುವ ಮುನ್ನವೇ ಆಶಾ ಎಂಬ ಹೆಣ್ಣು ಚಿರತೆ ಈ ವರ್ಷದ ಜನವರಿಯಲ್ಲಿ 3 ಮರಿಗಳಿಗೆ ಜನ್ಮ ನೀಡಿತ್ತು.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ತೆಗೆದುಕೊಂಡ ನಿರ್ಣಯದಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: MB ಪಾಟೀಲ್
BREAKING: ‘ಶಿವಮೊಗ್ಗ ಏರ್ ಪೋರ್ಟ್’ಗೆ ‘ಪ್ರಧಾನಿ ನರೇಂದ್ರ ಮೋದಿ’ ಆಗಮನ