ಬೆಂಗಳೂರು : ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಹೇಳಿದರೂ ಕೂಡ ನನ್ನ ಸ್ಪರ್ಧೆ ಖಚಿತ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ಕೆಎಸ್ ಈಶ್ವರಪ್ಪ ತಿಳಿಸಿದರು.
ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರೇ ಹೇಳಿದರು ಹಿಂದೆ ಸರಿಯುವುದಿಲ್ಲ. ಮೋದಿ ಅಮಿತ್ ಶಾ ಹೇಳಿದರು ನನ್ನ ಸ್ಪರ್ಧೆ ಖಚಿತ. ಚುನಾವಣೆ ಸ್ಪರ್ಧೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಯಾರೇ ಫೋನ್ ಮಾಡಿದರು ನನ್ನ ನಿರ್ಧಾರ ಅಚಲವಾಗಿದೆ. ಇದೊಂದುಕ್ಕೆ ಮಾತ್ರ ಕ್ಷಮಿಸಿ ಅಂತ ನಾನು ಹೇಳುತ್ತೇನೆ ಕಾರ್ಯಕರ್ತರನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.
ನಮ್ಮ ನಾಯಕರ ಬಗ್ಗೆ ನನಗೆ ಇವತ್ತು ಗೌರವವಿದೆ. ಮೋದಿಯವರು, ಅಮಿತ್ ಶಾ ಅವರಾಗಲಿ ಫೋನ್ ಕರೆ ಮಾಡಿ ಹೇಳಿದರೂ ಕೂಡ ನನ್ನ ನಿರ್ಧಾರ ಬದಲಾಗಲ್ಲ. ಹಿಂದುತ್ವ ಗೋಸ್ಕರ ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ.ದಯವಿಟ್ಟು ನನ್ನನ್ನು ಕ್ಷಮಿಸಿ ನಿಮ್ಮ ಮಾತನ್ನು ಮೀರುತ್ತೇನೆ ಎಂದು ಅಂದುಕೊಳ್ಳಬೇಡಿ ಎಂದು ನಿಮ್ಮ ಮೂಲಕ ಕ್ಷಮೆ ಕೆಳುತ್ತಿದ್ದೇನೆ ಎಂದು ತಿಳಿಸಿದರು.