ದಾವಣಗೆರೆ : ವೇಗವಾಗಿ ಬಂದಂತಹ ಟಿಪ್ಪರ್ ಒಂದು ಹಿಂಬದಿಂದ ಬೈಕುಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಬಿಜೆಪಿ ಹೈಕಮಾಂಡ್ ಜೊತೆಗಿನ ಸಂಧಾನ ವಿಫಲ: ಲೋಕಸಭೆಗೆ ಕೆ.ಎಸ್ ಈಶ್ವರಪ್ಪ ಸ್ಪರ್ಧೆ ಫಿಕ್ಸ್!
ಈ ಒಂದು ಅಪಘಾತದಲ್ಲಿ ದಾವಣಗೆರೆ ತಾಲ್ಲೂಕಿನ ಬಾತಿ ಗ್ರಾಮ ರಾಕೇಶ್ (22), ಆಕಾಶ್ (23) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದ್ದು, ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು
ಯುವಕರಿಬ್ಬರ ಮೃತದೇಹಗಳನ್ನು ಹರಿಹರ ತಾಲ್ಲೂಕಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.