ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪತ್ರ ಕಾಂತೇಶ ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ವೆದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದ್ರ ನಡೆಸಿದ್ದಾರೆ. ಹೀಗಾಗಿ ಇಂದು ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರ ಸಂಧಾನ ವಿಫಲವಾಗಿದೆ.
BREAKING : ಬಾಗಲಕೋಟೆ : ವಿದ್ಯಾರ್ಥಿನಿ ಮೇಲೆ ‘ಕಳ್ಳತನ’ ಆರೋಪ : ಮನನೊಂದ ಬಾಲಕಿ ‘ನೇಣಿಗೆ’ ಶರಣು
ಇಂದು ಕೇಂದ್ರ ನಾಯಕರಾದ ರಾಧಾ ಮೋಹನ್ ಅಗರ್ವಾಲ್ ಅವರು ಕೆ ಎಸ್ ಈಶ್ವರಪ್ಪ ಅವರ ಮನವೊಲಿಸಲು ಅವರ ಮನೆಗೆ ಆಗಮಿಸಿದ್ದರು ಈ ವೇಳೆ ಇವರು ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಅವರು ಕೆಲಸ ಇದೆ ಎಂದು ಮನೆಯಿಂದ ತೆರಳಿದ್ದಾರೆ. ಈ ವೇಳೆ ರಾಧಾ ಮೋಹನ್ ಅಗರ್ವಾಲ್ ಅವರು ಈಶ್ವರಪ್ಪ ಅವರ ಭೇಟಿಗಾಗಿ ಸುಮಾರು ಒಂದು ಗಂಟೆಗಳ ಕಾಲ ವರೆಗೂ ಕಾದು ಕಾದು ಸುಸ್ತಾಗಿ ಅನಂತರ ಅವರು ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಷಯದ ಕುರಿತಾಗಿ ನಮ್ಮ ಕೈಲಾದಷ್ಟು ಸಂಧಾನ ಮಾಡುವ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದರು. ನಾನು ಕೈಲಾದಷ್ಟು ಈಶ್ವರಪ್ಪ ಮನವೊಲಿಸುತ್ತೇನೆ ಎಂದು ಅವರು ತಿಳಿಸಿದರು. ಈಶ್ವರಪ್ಪ ಜೊತೆಗಿನ ಹೈಕಮಾಂಡ್ ಸಂಧಾನ ವಿಫಲವಾಗಿದ್ದು, ಕೇಂದ್ರ ನಾಯಕರ ಸಂಧಾನಕ್ಕೂ ಈಶ್ವರ ಜಗ್ಗಲಿಲ್ಲ ಎನ್ನಲಾಗುತ್ತಿದೆ.
ನೀರಿನ ಟ್ಯಾಂಕರ್ ಗಳ ಮೇಲೆ ನಿಗಾ ಇಟ್ಟ ಕರ್ನಾಟಕ ಚುನಾವಣಾ ಆಯೋಗ : ವರದಿ
ಅಸಮಾಧಾನ ಶಮನಕ್ಕೆ ಮುಂದಾದ ವರಿಷ್ಠರಿಗೆ ಇದೀಗ ಹಿನ್ನಡೆಯಾಗಿದೆ. ಸುಮಾರು ಒಂದು ಗಂಟೆಯಾದರೂ ಬಂದಿಲ್ಲ. ಕೆಎಸ್ ಈಶ್ವರಪ್ಪ ಬಾರದೆ ಕಾದು ಕಾದು ವರಿಷ್ಠರು ಸುಸ್ತಾಗಿದ್ದಾರೆ. ಸುಮಾರು ಒಂದು ಗಂಟೆ ಕಾದ ರಾಧಾ ಮೋಹನ್ ಅಗರ್ವಾಲ್ ಕಾದಿದ್ದಾರೆ. ಈಶ್ವರಪ್ಪ ಮನೆಗೆ ವಾಪಸ್ ಬರದಿದ್ದರಿಂದ ವರಿಷ್ಠರು ವಾಪಸ್ ತೆರಳಿದ್ದಾರೆ.
ಇದೀಗ ಈಶ್ವರಪ್ಪ ಅವರ ನಡೆ ಕುತೂಹಲ ಮೂಡಿಸಿದ್ದು ಹೈಕಮಾಂಡ್ ಜೊತೆಗಿನ ಸಂಧಾನ ವಿಫಲವಾಗಿದೆ ಕೇಂದ್ರ ನಾಯಕರ ಸಂಧಾನಕ್ಕೂ ಕೂಡ ಈಶ್ವರಪ್ಪ ಬಗ್ಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವುದು ಬಹುತೇಕ ಕಷ್ಟವಾಗಿದೆ ಎಂದು ತಿಳಿದುಬಂದಿದೆ.
ಪತ್ನಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಒತ್ತಾಯಿಸಿದ ಪತಿಗೆ 50,000 ರೂ ದಂಡ ವಿಧಿಸಿದ ಹೈಕೋರ್ಟ್