ಬೆಂಗಳೂರು : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ವ್ಯಕ್ತಿಗೆ ನಿವೃತ್ತಿಯ ನಂತರ ಸಿಗಬೇಕಾದ ಸೌಲಭ್ಯಗಳನ್ನು ತಡೆಹಿಡಿದ ಹೆಸ್ಕಾಂ ಕ್ರಮಕ್ಕೆ ಹೈಕೋರ್ಟ್ ಕಿಡಿ ಕಾರಿದ್ದು, ಇದೀಗ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
BREAKING: ‘IPL ಪಂದ್ಯಾವಳಿ’ ವಿದೇಶಕ್ಕೆ ಸ್ಥಳಾಂತರಿಸುವುದಿಲ್ಲ – ಜಯ್ ಶಾ ಸ್ಪಷ್ಟನೆ | IPL Won’t Be Moved
ಹೆಸ್ಕಾಂನ ನಿವೃತ್ತ ಎಂಜಿನಿಯರ್ ಮಕಾಂದಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಹೆಸ್ಕಾಂನಲ್ಲಿ ಎಂಜಿನಿಯರ್ ಆಗಿದ್ದ ಅರ್ಜಿದಾರರು ದುರಸ್ತಿಗೊಳಗಾದ ವಿದ್ಯುತ್ ಪ್ರವರ್ತಕ(ಟ್ರಾನ್ಸ್ ಫಾರ್ಮರ್)ಗಳನ್ನು ಸಂಗ್ರಹಿಸಿ ಹಿಂದಿರುಗಿಸದಿರುವ ಆರೋಪ ಸಂಬಂಧ 86 ಲಕ್ಷ ರೂ.ನಿಮ್ಮಿಂದ ವಸೂಲಿ ಮಾಡಬೇಕಾಗಿದೆ ಎಂದು ತಿಳಿಸಿತು.
ಹೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ ಶೇ.25 ರಷ್ಟು ಪಿಂಚಣಿ ಮತ್ತು ಶೇ.50 ರಷ್ಟು ಗ್ರಾಚ್ಯುಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ನಿವೃತ್ತಿ ವೇತನ ಪಿಂಚಣಿಯನ್ನು ತಡೆ ಹಿಡಿಯಲಾಗಿದೆ ಎಂದು ಹೆಸ್ಕಾಂ ತಿಳಿಸಿತು. ಹೈಕೋರ್ಟ್ದಲ್ಲಿ ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ತಮ್ಮ ವಿರುದ್ಧ ಯಾವುದೇ ರೀತಿಯ ಇಲಾಖೆವಾರು ತನಿಖೆ ಕೈಗೊಳ್ಳದೇ ದಂಡ ವಿಧಿಸಿದ್ದು ವಸೂಲಿಗೆ ಮುಂದಾಗಿದ್ದಾರೆ ಎಂದು ವಾದಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ- ಡಿಸಿಎಂ ಡಿ.ಕೆ ಶಿವಕುಮಾರ್
ವಿಚಾರಣೆ ನಡೆಸಿದ ಪೀಠವು ದಂಡದ ಮೊತ್ತವನ್ನು ಅರ್ಜಿದಾರರಿಗೆ ಪಾವತಿ ಮಾಡಲು ಹೆಸ್ಕಾಂಗೆ ಸೂಚನೆ ನೀಡಿದೆ. ಅಲ್ಲದೇ ನಿವೃತ್ತಿ ನಂತರ ಲಭ್ಯವಾಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಶೇ.6 ರಷ್ಟು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಪೀಠ ಸೂಚನೆ ನೀಡಿದೆ.ಜತೆಗೆ, ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಇಲಾಖೆವಾರು ವಿಚಾರಣೆ ನಡೆಸದೇ ಪಿಂಚಣಿ ಸೌಲಭ್ಯಗಳನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ತಿಳಿಸಿದೆ.
ಜತೆಗೆ, ಅರ್ಜಿದಾರರ ಹೆಸ್ಕಾಂ ಸಂಸ್ಥೆಗೆ ನೇಮಕಗೊಂಡಿದ್ದಾರೆ, ಪ್ರವರ್ತಕರಗಳನ್ನು ಹಿಂದಿರುಗಿಸದ ಆರೋಪ ಕುರಿತ ಯಾವುದೇ ಇಲಾಖಾವಾರು ತನಿಖೆ ಕೈಗೊಳ್ಳದೇ ದಂಡವನ್ನು ವಸೂಲಿ ಮಾಡಲಾಗಿದೆ. ಆದರೂ ನಿವೃತ್ತರಾದ ಬಳಿಕ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿದೆ. ಉದ್ಯೋಗದಾತ ಸಂಸ್ಥೆಯು ಉದ್ಯೋಗಿಗಳ ಹಕ್ಕುಗಳ ಮೇಲೆ ನಡೆಸುವ ದಾಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ರೀತಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ತಡೆ ಹಿಡಿಯುವುದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಪೀಠ ತಿಳಿಸಿದೆ.
ಮೋದಿ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ : ಪ್ರಹ್ಲಾದ್ ಜೋಶಿ