ಮಹಾರಾಷ್ಟ್ರ : IIT-IIM ಪದವೀಧರನೊಬ್ಬ ಕೆಲಸದ ಒತ್ತಡ ತಾಳಲಾರದೆ, ಎಂಎನ್‌ಸಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ ಯುವಕನೊಬ್ಬ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮಾಟುಂಗಾದಲ್ಲಿ ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
BREAKING : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಪ್ಲೈಓವರ್‌ನಿಂದ ಬಿದ್ದು ಚಾಲಕ ಸಾವು
ಮೃತ ಯುವಕ ಸೌರಭ್ ಕುಮಾರ್ ಲಡ್ಡಾ ಎಂದು ಗುರುತಿಸಲಾಗಿದ್ದು, ಐಐಟಿ ಮತ್ತು ಐಐಎಂ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಪದವಿ ಪಡೆದ ಭರವಸೆಯ ಯುವ ಪ್ರತಿಭೆ ನಿರಂತರ ಒತ್ತಡದಿಂದ ಬೇಸತ್ತು, ಕಡೆಗೆ ಏನು ಮಾಡಬೇಕೆಂಬುದು ತಿಳಿಯದೆ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೇ 20ಕ್ಕೆ ಮುಂಬೈನಲ್ಲಿ ಮತದಾನ, ‘ಭಾರತೀಯ ಷೇರು ಮಾರುಕಟ್ಟೆ’ ಮುಚ್ಚುವ ಸಾಧ್ಯತೆ
ಸದ್ಯ ಮಾಟುಂಗಾ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಸುತ್ತಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚುವರಿ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ವಡಾಲಾದ ತನ್ನ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಸಾವಿಗೀಡಾಗಿದ್ದಾನೆ. ಲಡ್ಡಾ ಇತ್ತೀಚೆಗೆ ಅಹಮದಾಬಾದ್‌ನಿಂದ ಹಿಂದಿರುಗಿದ್ದು, ತಮ್ಮ ಉದ್ಯೋಗದಾತರ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.