ಬೆಂಗಳೂರು : ರಾಜ್ಯ ಸರ್ಕಾರ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಒಟ್ಟು ರೂ. 84 ಕೋಟಿ ಪಾವತಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ನಿರ್ದೇಶನದಂತೆ ಆದೇಶ ಹೊರಡಿಸಲಾಗಿದೆ.
ಈಗ ‘ಆಸ್ತಿ ನೋಂದಣಿ’ ಮತ್ತಷ್ಟು ಸುಲಭ: ರಾಜ್ಯದ ‘ಎಲ್ಲಿ ಬೇಕಾದ್ರೂ ನಿಮ್ಮ ಆಸ್ತಿ ನೋಂದಣಿ’ ಮಾಡಬಹುದು
ಕೆಎಸ್ಆರ್ಟಿಸಿಯ ಸಿಬ್ಬಂದಿಗಳಿಗೆ ಸದರಿ ಅವಧಿಯಲ್ಲಿನ ನಿವೃತ್ತ ಸಿಬ್ಬಂದಿಗಳನ್ನು ಸೇರಿದಂತೆ
1) 2022-23 ಮೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತ ರೂ.24 ಕೋಟಿ ರೂಪಾಯಿ
2) ಜುಲೈ-2022 ರಿಂದ ನವೆಂಬರ್-2022 ರ ವರ್ಷದ 5 ತಿಂಗಳು
3) ಜನವರಿ-2023 ರಿಂದ ಜುಲೈ-2023 ರವರೆಗಿನ 7 ತಿಂಗಳು
4) ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ 4 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ ರೂ.54 ಕೋಟಿಯನ್ನು ಪಾವತಿಸಲು ಆದೇಶಿಸಲಾಗಿದೆ.
ಇನ್ನೂ ನಿನ್ನೆ , ಈ ವರ್ಷ ಅಂದರೆ ಜನವರಿ-2024 ರಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿಗಳ ಉಪಧನ ರೂ.6 ಕೋಟಿ ಮೊತ್ತವನ್ನು ವ್ಯವಸ್ಥಾಪಕ ನಿರ್ದೇಶಕರು ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ.
BREAKING : ಬೆಂಗಳೂರಲ್ಲಿ ‘ಮಹಿಳಾ’ ಸಿಬ್ಬಂದಿಗೆ ‘ಮೆಟ್ರೋ’ ಅಧಿಕಾರಿಯಿಂದ ‘ಲೈಂಗಿಕ ಕಿರುಕುಳ’ : ‘FIR’ ದಾಖಲು