ಶಿವಮೊಗ್ಗ : ತಂಗಿಯನ್ನು ಪ್ರೀತಿಸಿದ ಎಂಬ ಒಂದೇ ಒಂದು ಕಾರಣಕ್ಕೆ ಮದುವೆ ಮಾಡಿಕೊಡುವುದಾಗಿ ಹೇಳಿ ನಂಬಿಸಿ ಯುವಕರನ್ನು ಕರೆಸಿ ಇನ್ನೋವಾ ಕಾರಿನಲ್ಲಿ ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ತೊಗರ್ಸಿ ಬಳಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪ ಯುವಕ ವೀರೇಶ್ ಎಂಬಾತ ಕೊಲೆಯಾದ ದುರ್ದೈವಿ. ಶಿಕಾರಿಪುರ ತಾಲೂಕಿನ ಯುವತಿ ಅಂಕಿತ ಎಂಬವರನ್ನು ವೀರೇಶ್ ಪ್ರೀತಿಸುತ್ತಿದ್ದನು. ಇಬ್ಬರು ಒಂದೇ ಜಾತಿಯವರಾಗಿದ್ದು ಹತ್ತಿರದ ಸಂಬಂಧಿಕರು ಆಗಿದ್ದರು. ಯುವತಿ ಶಿವಮೊಗ್ಗದ ಪೇಯಿಂಗ್ ಗೆಸ್ಟ್(ಪಿಜಿ)ಯಲ್ಲಿದ್ದು ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವಿಚಾರ ಮನೆಯವರಿಗೆ ಗೊತ್ತಾಗಿದ್ದು, ವಿರೋಧ ಮಾಡಿದ್ದಾರೆ.
ಯುವತಿ ಅಂಕಿತಾಳ ಸಹೋದರ ಪ್ರವೀಣ್ ಹಾಗೂ ಆತನ ಸಹಚರರು ನಿನ್ನೆ ಶಿವಮೊಗ್ಗದ ಗಾಡಿ ಕೊಪ್ಪದಲ್ಲಿರುವ ವೀರೇಶ್ ಮನೆಗೆ ಬಂದಿದ್ದರು. ತಾನು ಪ್ರೀತಿ ಮಾಡುವ ಯುವತಿ ಅಂಕಿತಾಳನ್ನು ಮದುವೆ ಮಾಡಿಕೊಡುವುದಾಗಿ ಅವರ ಮನೆಯವರೇ ಹೇಳಿದ್ದನ್ನು ನಂಬಿದ ವೀರೇಶ್, ತನ್ನ ಪ್ರೇಯಸಿಯೊಂದಿಗೆ ಇದ್ದ ಎಲ್ಲ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದ್ದನು.
ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ನಂತರ ಯುವತಿಯನ್ನು ಮದುವೆ ಮದುವೆ ಮಾಡಿಕೊಡುವುದಾಗಿ ತಿಳಿಸಿ ಭರವಸೆ ನೀಡಿದ್ದರು. ನಂತರ, ತಡರಾತ್ರಿ 10 ಗಂಟೆಗೆ ಅಂಕಿತಾ ಅಳುತ್ತಿದ್ದಾಳೆ, ನಿನ್ನನ್ನು ನೋಡಬೇಕು ಎನ್ನುತ್ತಿದ್ದಾಳೆ. ಈಗಲೇ ನೀನು ಮನೆಗೆ ಬಾ ಎಂದು ಕರೆ ಮಾಡಿದ್ದಾರೆ. ಇನ್ನು ಯುವತಿ ಮನೆಯವರು ಕರೆದಿದ್ದರಿಂದ ಯುವಕ ವೀರೇಶ್ ಇನ್ನೋವಾ ಕಾರನ್ನು ತೆಗೆದುಕೊಂಡು ತೊಗರ್ಸಿ ಬಳಿ ಹೋಗಿದ್ದಾನೆ. ಆಗ ಯುವಕ ವೀರೇಶನನ್ನು ರಸ್ತೆಯ ಬದಿಗೆ ಕರೆದೊಯ್ದು ಕಾರಿನಲ್ಲಿಯೇ ಕೂರಿಸಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
BREAKING: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆ | Anuradha Paudwal
ಇನ್ನು ವೀರೇಶ್ ತಾಯಿ ಮಹದೇವಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.ಇನ್ನು ತೊಗರ್ಸಿ ಬಳಿ ಕಾರು ಸುಟ್ಟಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ, ವಿರೇಶ್ನ ತಾಯಿಯನ್ನು ಕರೆಸಿ ಕಾರಿನ ನಂಬರ್ ಪ್ಲೇಟ್ ತೋರಿಸಿ ಕೇಳಿದ್ದಾರೆ. ಆಗ, ಇದು ತನ್ನ ಮಗ ತೆಗೆದುಕೊಂಡು ಹೋಗಿದ್ದ ಕಾರು ಎಂದು ಗುರುತಿಸಿದ್ದಾರೆ. ಇನ್ನು ಕಾರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಯುವಕ ವಿರೇಶನದ್ದೇ ಎಂದು ಗುರುತಿಸಲಾಗಿದೆ. ಇನ್ನು ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.