ಬೆಂಗಳೂರು : ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತದೆಂದು ಮಲತಂದೆಯಿಂದ ಪುಟ್ಟ ಹೆಣ್ಣು ಮಗುವಿನ ಮೇಲೆ ಕಳೆದೊಂದು ವರ್ಷದಿಂದ ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.
ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಹೌದು ಬೆಂಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ದಿಶಾ(4) ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆ ಹಾಗೂ ಮಗುವಿನ ತಾಯಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಳಿಂದ ಹಲ್ಲೆ ನಡೆಸಲಾಗಿದೆ. ತಾಯಿ ಮಂಜುಳಾ ಜೊತೆಗೆ ನಾಲ್ಕು ವರ್ಷದ ದಿಶಾ ವಾಸವಿದ್ದಳು ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಮುನ್ನೆಚ್ಚರಿಕೆಯಾಗಿ ಆಟಗಾರರ ‘ಪಾಸ್ಪೋರ್ಟ್’ ಸಂಗ್ರಹಿಸಿದ ಐಪಿಎಲ್ ತಂಡಗಳು
ಇದೇ ವೇಳೆ ತಾಯಿಯೊಂದಿಗೆ ಸಂಬಂಧ ಬೆಳೆಸಿದ್ದ ಆರೋಪಿ ಮಂಜುನಾಥ್ ಮನೆಯಲ್ಲೇ ವಾಸವಾಗಿದ್ದ, ಮನೆಯಲ್ಲಿ ಸರಸ ಸಲ್ಲಾಪದ ವೇಳೆ ಪದೇಪದೆ ಮಗು ಅಡ್ಡಿಯಾಗುತ್ತದೆಂದು ಮಗುವಿನ ಮೇಲೆ ಹಲ್ಲೆ ಕ್ರೂರಿಗಳು ಹಲ್ಲೆ ನಡೆಸಿದ್ದಾರೆ. ಕಳೆದೊಂದು ವರ್ಷದಿಂದ ಹೆಣ್ಣುಮಗುವಿನ ಮೇಲೆ ನಿರಂತರ ಹಲ್ಲೆ ನಡೆಸಲಾಗಿದೆ. ಮಗುವಿನ ಕೈ ಮತ್ತು ಕುತ್ತಿಗೆ ಭಾಗದಲ್ಲಿ ಹೀಟರ್ ಮತ್ತು ಸಿಗರೇಟ್ ನಿಂದ ಸುಟ್ಟ ಪಾಪಿ ಮಲತಂದೆ. ತಲೆ ಮತ್ತು ಹಣೆ ಭಾಗದಲ್ಲೂ ಹಲ್ಲೆ ಮಾಡಿದ್ದಾನೆ.
BREAKING: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆ | Anuradha Paudwal
ನಿನ್ನೆ ಸಂಜೆ ಸಹ ಕುಡಿದ ಮತ್ತಿನಲ್ಲಿ ಮಗುವಿನ ಮೇಲೆ ಹಲ್ಲೆ ನಡೆಸಿರುವ ಮಲತಂದೆ ಕೇಬಲ್ ವೈರ್‌ನಿಂದ ಮಗುವಿನ ಮೇಲೆ ಗಂಭೀರವಾಗಿ ನಡೆಸಿರುವ ಕ್ರೂರಿ. ಹಲ್ಲೆಯಿಂದ ಮಗುವಿನ ಕೈ ಕಂದು ಬಣ್ಣಕ್ಕೆ ತಿರುಗಿದೆ. ಮಗುವಿನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದಾರೆ. ಮಲತಂದೆ ಮತ್ತು ತಾಯಿಯಿಂದ ಹಲ್ಲೆ ನಡೆದ ಬಗ್ಗೆ ಸ್ಥಳೀಯರಿಗೆ ತಿಳಿಸಿದ ಮಗು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮಂಜುನಾಥ ಮತ್ತು ತಾಯಿ ಮಂಜುಳಾಗೆ ಸ್ಥಳೀಯರು ಥಳಿಸಿ ಬಳಿಕ ಹೆಬ್ಬಗೋಡಿ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.