ನವದೆಹಲಿ : ಅಬಕಾರಿ ನೀತಿ ಹಗರಣ ಸಂಬಂಧ ಇಡಿ ಸಲ್ಲಿಸಿದ್ದ ದೂರುಗಳ ಹಿನ್ನೆಲೆಯಲ್ಲಿ ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಬಕಾರಿ ನೀತಿ ಹಗರಣ ಸಂಬಂಧ ಇಡಿ ಸಲ್ಲಿಸಿದ ಎರಡು ದೂರುಗಳ ಮೇಲೆ ನ್ಯಾಯಾಲಯ ನೀಡಿದ ಸಮನ್ಸ್ಗೆ ಅನುಗುಣವಾಗಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ರೂಸ್ ಅವೆನ್ಯೂ ಕೋರ್ಟ್ಗೆ ಹಾಜರಾಗಿದ್ದಾರೆ. ಇಂದು ಕೋರ್ಟ್ ನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಸಿಎಂಅರವಿಂದ್ ಕೇಜ್ರಿವಾಲ್ ಅವರಿಗೆ ಇದುವರೆಗೆ 8 ಬಾರಿ ಇಡಿ ಸಮನ್ಸ್ ನೀಡಿದೆ, ಆದರೆ ಅರವಿಂದ್ ಕೇಜ್ರಿವಾಲ್ ಒಮ್ಮೆಯೂ ವಿಚಾರಣೆಗೆ ಇಡಿ ಕಚೇರಿಗೆ ಹೋಗಿಲ್ಲ. ಇತ್ತೀಚೆಗೆ, ಕೇಜ್ರಿವಾಲ್ ಇಡಿ ಸಮನ್ಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಈ ಪ್ರಕರಣದಲ್ಲಿ, ಕೇಜ್ರಿವಾಲ್ ಅವರಿಗೆ ರೂಸ್ ಅವೆನ್ಯೂ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನು ಮಂಜೂರು ಮಾಡಿದೆ.
ವೈಯಕ್ತಿಕ ಹಾಜರಾತಿಯನ್ನು ತಪ್ಪಿಸಲು ಕೇಜ್ರಿವಾಲ್ ಅವರ ಮನವಿಯನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ತಿರಸ್ಕರಿಸಿದೆ ಮತ್ತು ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಳಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದರು