ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಫೆಬ್ರವರಿ 2 ರಂದು ಹಿರಿಯ ಬಿಜೆಪಿ ನಾಯಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 17 ವರ್ಷದ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ. ಪೋಕ್ಸೊ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪೊಲೀಸರು ಮಾಜಿ ಸಿಎಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಫೆಬ್ರವರಿ 2 ರಂದು ವಂಚನೆ ಪ್ರಕರಣದಲ್ಲಿ ಸಹಾಯ ಪಡೆಯಲು ತಾಯಿ ಮತ್ತು ಮಗಳು ಯಡಿಯೂರಪ್ಪ ಅವರನ್ನು ಭೇಟಿಯಾದಾಗ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಇದಲ್ಲದೇ ದೂರುದಾರ ಮಹಿಳೆ ವಿರುದ್ದ ಅನುಮಾನಗಳು ಹುಟ್ಟಿಕೊಂಡಿದ್ದು, ದೂರುದಾರ ಮಹಿಳೆ ಈಗಾಗಲೇ ಹಲವು ದೂರುಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಉದ್ಯಮಿ, ರಾಜಕಾರಣಿಗಳು ಸೇರಿದಂಥೆ ಹಲವು ಮಂದಿ ಕೂಡ ಮಹಿಳೆ ದೂರು ನೀಡಿದ್ದು, ಒಟ್ಟಿನಲ್ಲಿ ಘಟನೆ ಸಂಬಂಧ ಸತ್ಯಾಂಶವನ್ನು ಕಂಡು ಹಿಡಿಯಲು ಸರಿಯಾದ ತನಿಖೆ ಬಳಿಕ ಮಾತ್ರ ಎಲ್ಲವು ತಿಳಿದು ಬರಲಿದೆ.
ಇನ್ನೂ ಸದ್ಯಕ್ಕೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆದಾಗ ಸತ್ಯ ಸತ್ಯತೆ ಹೊರಬರಲಿದೆ.