ಬೆಂಗಳೂರು: ಪಾಕಿಸ್ತಾನದ ಪರವಾಗಿ ವಿಧಾನಸೌಧದಲ್ಲಿ ಘೋಷಣೆ ಕೂಗಿದ್ದಂತ ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಫೆಬ್ರವರಿ 27, 2024ರಂದು ವಿಧಾನಸೌಧದಲ್ಲಿ ನಾಸಿರ್ ಹುಸೇನ್ ಗೆಲುವಿನ ಬಳಿಕ ಮೂವರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನು ಕೂಗಲಾಗಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಬಳಿಕ ಆ ವೀಡಿಯೋವನ್ನು ಎಫ್ಎಸ್ಎಲ್ ತನಿಖೆಗೂ ಕಳುಹಿಸಿಕೊಡಲಾಗಿತ್ತು.
ಇದರ ನಡುವೆ ವಿಧಾನಸೌಧ ಠಾಣೆಯ ಪೊಲೀಸರಿಂದ ಮೊಹಮ್ಮದ್ ಶಫಿ ನಾಶಿಪುಡಿ, ಮಿಜಾಮಿಲ್ ಹಾಗೂ ಇಮ್ತಿಯಾಜ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು.
ಇಂತಹ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎಸಿಎಂಎಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಮೂವರು ಆರೋಪಿಗಳಿಗೆ ಇಬ್ಬರ ಶೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
‘ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಅಧ್ಯಕ್ಷ’ರಾಗಿ ‘ಮಾಜಿ MLC ರಮೇಶ್ ಬಾಬು’ ನೇಮಕ
‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ‘ಐವರು IAS’ ಅಧಿಕಾರಿಗಳ ವರ್ಗಾವಣೆ