ಬೆಂಗಳೂರು : ಕಾಂತೇಶ್ ಗೆ ಟಿಕೆಟ್ ಕೊಡದಂಗೆ ಮೋಸ ಮಾಡಿದ್ದೆ ಬಿಎಸ್ ಯಡಿಯೂರಪ್ಪ. ಯಡಿಯೂರಪ್ಪ ಮಾತು ಕೇಳಿ ನನ್ನ ಮಗ ಮೋಸ ಹೋಗಿದ್ದಾನೆ ಎಂದು ಯಡಿಯೂರಪ್ಪ ವಿರುದ್ಧ ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇದೀಗ ಮತ್ತೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ 48 ಗಂಟೆ ಅವಧಿಯಲ್ಲಿ ಭಾರಿ ತಾಪಮಾನ ‘ಬಿಸಿಗಾಳಿ’ : ಭಾರತೀಯ ಹವಾಮಾನ ಇಲಾಖೆಯಿಂದ ಸೂಚನೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾಗೆ ಟಿಕೆಟ್ ಕೇಳಿದಷ್ಟು ನನ್ನ ಮಗನಿಗೆ ಯಾಕೆ ಕೇಳಲಿಲ್ಲ? ಯಡಿಯೂರಪ್ಪ ಇದುವರೆಗೂ ಕೂಡ ನನ್ನ ಜೊತೆಗೆ ಮಾತನಾಡಿಲ್ಲ. ಎಂಎಲ್ಸಿ ಸ್ಥಾನ ಎಂಬುದು ಮೂವಿಗೆ ತುಪ್ಪ ಸವರಿಸುವ ತಂತ್ರವಾಗಿದೆ ಎಂದು ಕಿಡಿ ಕಾರಿದ್ದಾರೆ.
ಕ್ಷೇತ್ರದ ಎಲ್ಲಾ ಸಮುದಾಯಗಳ ಪ್ರಮುಖರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಯಡಿಯೂರಪ್ಪ ಮತ್ತು ಮಕ್ಕಳು ನಮಗೆ ಅನ್ಯಾಯ ಮಾಡಿದ್ದಾರೆ ಪುತ್ರ ಕಾಂತೇಶ್ ಗೆ ಟಿಕೆಟ್ ಕೊಡಿಸುತ್ತೇನೆ ಅಂತ ಹೇಳಿದ್ದರು. ಹಾವೇರಿ ಕ್ಷೇತ್ರದಲ್ಲಿ ನಾನೇ ಓಡಾಡಿ ಗೆಲ್ಲಿಸುವುದಾಗಿಯೂ ಕೂಡ ಹೇಳಿದ್ದರು ಬಿಎಸ್ ಯಡಿಯೂರಪ್ಪ ಮಾತು ನಂಬಿ ಕಾಂತೇಶ್ ವರ್ಷಾನುಗಟ್ಟಲೆ ಓಡಾಡಿದ್ದ.
ಖಾಲಿ ಹೊಟ್ಟೆಯಲ್ಲಿ ‘ಟೀ’ ಕುಡಿದ್ರೆ ಏನಾಗುತ್ತೆ ಗೊತ್ತಾ? ದುಷ್ಪರಿಣಾಮಗಳು ತಿಳಿದ್ರೆ, ಬೆಚ್ಚಿ ಬೀಳ್ತೀರಾ : ಅಧ್ಯಯನ
ಟಿಕೆಟ್ ಕೊಟ್ಟರೆ ಗೆಲ್ಲುತ್ತಾನೆ ಎಂದು ಬಿಎಸ್ ಯಡಿಯೂರಪ್ಪ ಮೋಸ ಮಾಡಿದರು. ಈಗ ಎಂಎಲ್ಸಿ ಮಾಡುತ್ತೇವೆ ಅಂತಿದ್ದಾರೆ ಹೇಗೆ ನಂಬುವುದು. ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೆಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕ ಎರಡು ದಿನದಲ್ಲಿ ಮಂತ್ರಿ ಮಾಡುತ್ತೇನೆ ಎಂದು ಹೇಳಿದರು. ಕ್ಲೀನ್ ಚಿಟ್ ಸಿಕ್ಕ ನಂತರ ಯಾಕೆ ನನ್ನನ್ನು ಮಂತ್ರಿ ಮಾಡಲಿಲ್ಲ ಎಂದು ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಹಾಗೂ ಡಿವಿ ಸದಾನಂದ ಗೌಡರಿಗೆ ಅನ್ಯಾಯವಾಗಿದೆ. ಧ್ವನಿಯಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಒತ್ತಾಯಿಸಿದ್ದಾರೆ. ಶುಕ್ರವಾರ ಸಂಜೆ 5:00 ಗಂಟೆಗೆ ಶಿವಮೊಗ್ಗದಲ್ಲಿ ಸಭೆ ನಡೆಸುತ್ತಿದ್ದೇವೆ. ಬಂಜಾರ ಭವನದಲ್ಲಿ ಎಲ್ಲಾ ಸಮುದಾಯದವರು ಈ ಸಭೆಯಲ್ಲಿ ಸೇರುತ್ತಿದ್ದಾರೆ ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
BREAKING : ‘PSI’ ನೇಮಕಾತಿ ಹಗರಣ ಕೇಸ್ : ಹೆಚ್ಚಿನ ತನಿಖೆಗಾಗಿ ‘SIT’ ರಚನೆಗೆ ರಾಜ್ಯ ಸರ್ಕಾರ ತೀರ್ಮಾನ