ಕೊಪ್ಪಳ : ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಲೋಕಸಭಾ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಬಿಜೆಪಿ ಕಚೇರಿಗೇ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಮತ್ತೊಂದೆಡೆ ಕರಡಿ ಸಂಗಣ್ಣನ ಬೆಂಬಲಿಗರಿಗೆ ಬೂಟು ತಗೊಂಡು ಹೊಡಿತೀನಿ ನನ್ನಮಗನೆ’ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಗುಡುಗಿದ್ದಾರೆ.
BREAKING : ಗದಗದಲ್ಲಿ ಹಣ ಹಂಚಿಕೆ ವಿಚಾರವಾಗಿ ಗಲಾಟೆ : ಮೊದಲ ಹೆಂಡತಿಯ ಮಕ್ಕಳಿಂದ ತಂದೆಯ ಭೀಕರ ಕೊಲೆ
ಸಂಸದ ಕರಡಿ ಸಂಗಣ್ಣ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೂಡ ಆಗಮಿಸಿದ್ದರು. ಈ ವೇಳೆ ಸಂಸದ ಸಂಗಣ್ಣ ಬೆಂಬಲಿಗನೊಬ್ಬ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಗರಂ ಆದ ಎಂಎಲ್‌ಸಿ ಹೇಮಲತಾ ನಾಯಕ್ ಅವರು, ನೀನ್ಯಾವನೋ ನನ್ನ ಕೇಳುವುದಕ್ಕೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ 2 ಬ್ಯಾಂಕುಗಳ ಮೇಲೆ ‘RBI’ ಖಡಕ್ ಕ್ರಮ, ಭಾರಿ ದಂಡ ; ನೀವೂ ಈ ‘ಬ್ಯಾಂಕ್’ನಲ್ಲಿ ಖಾತೆ ಹೊಂದಿದ್ದೀರಾ.?
ಬಳಿಕ ಎದುರಿನ ವ್ಯಕ್ತಿ ನಾನು ಕಾರ್ಯಕರ್ತ ಹೀಗಾಗಿ ಕೇಳಿದ್ದೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಹೇಮಲತಾ ನಾಯಕ್ ನಾನು ಕೂಡ ಕಾರ್ಯಕರ್ತಳಾಗಿಯೇ ಕೆಲಸ ಮಾಡಿದವಳು. ನಾನು ಕೂಡ ಬಿಜೆಪಿ ಕಾರ್ಯಕರ್ತೆಯಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿಗೆ ಮಾತನಾಡಿದರೆ ಬೂಟು ತಗೊಂಡು ಹೊಡೆಯುತ್ತೇನೆ ನನ್ನ ಮಗನೇ ಎಂದು ಬೈದಿದ್ದಾರೆ.
‘ಜನೌಷಧಿ ಕೇಂದ್ರ’ ಉತ್ತೇಜನಕ್ಕೆ ಸರ್ಕಾರದ ಮಹತ್ವದ ನಿರ್ಧಾರ : ಬ್ಯಾಂಕ್ ಸಾಲಕ್ಕಾಗಿ ‘ಹೊಸ ಯೋಜನೆ’ ಜಾರಿ