ಗದಗ : ಜಮೀನು ಮಾರಾಟ ಮಾಡಿದ ನಂತರ ಬಂದ ಹಣದ ಹಂಚಿಕೆ ವಿಚಾರದಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿ ಮೊದಲ ಹೆಂಡತಿಯ ಮಕ್ಕಳು ಮಾರಕಾಸ್ತ್ರಗಳಿಂದ ತಮ್ಮ ತಂದೆಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಗದಗದಲ್ಲಿ ನಡೆದಿದೆ.
‘ಜನೌಷಧಿ ಕೇಂದ್ರ’ ಉತ್ತೇಜನಕ್ಕೆ ಸರ್ಕಾರದ ಮಹತ್ವದ ನಿರ್ಧಾರ : ಬ್ಯಾಂಕ್ ಸಾಲಕ್ಕಾಗಿ ‘ಹೊಸ ಯೋಜನೆ’ ಜಾರಿ
ವಿವೇಕಾನಂದ ಕರಿಯಲ್ಲಪ್ಪನವರ (52) ಹತ್ಯೆಗೀಡಾದ ದುರ್ದೈವಿ ಎಂದು ಹೇಳಲಾಗುತ್ತಿದ್ದು, ಪ್ರಕಾಶ ಹಾಗೂ ಮಲ್ಲೇಶ ತಂದೆಯನ್ನ ಕೊಂದ ಆರೋಪಿಗಳು ಎನ್ನಲಾಗುತ್ತಿದೆ.ಮೃತ ವಿವೇಕಾನಂದ ಕರಿಮಲ್ಲಪ್ಪಗೆ ಇಬ್ಬರು ಹೆಂಡತಿಯರು, ಮೊದಲನೇ ಹೆಂಡತಿ ಕಸ್ತೂರಮ್ಮ ಈಗಾಗಲೇ ಮೃತಾರಾಗಿದ್ದಾರೆ ಇನ್ನೂ ಎರಡನೇ ಹೆಂಡತಿ ರೇಖಾ ಎಂದು ಹೇಳಲಾಗುತ್ತಿದ್ದು, ಮೃತ ಕಸ್ತೂರಮ್ಮ ಮಕ್ಕಳೇ ತಂದೆಯನ್ನ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
‘ವಿಧಾನಸೌಧ’ದ ಮುಂದೆ 23 ಕೋಟಿ ವೆಚ್ಚದಲ್ಲಿ ‘ಭುವನೇಶ್ವರಿ ಪ್ರತಿಮೆ’ ಸ್ಥಾಪನೆಗೆ ‘ರಾಜ್ಯ ಸಚಿವ ಸಂಪುಟ’ ಒಪ್ಪಿಗೆ
6 ಎಕರೆ ಜಮೀನು ಹೊಂದಿದ್ದ ಮೃತ ವಿವೇಕಾನಂದ ಕರಿಮಲ್ಲಪ್ಪ. 6 ಎಕರೆ ಜಮೀನು ಪೈಕಿ 3 ಎಕರೆ ಮಾರಾಟ ಮಾಡಿದ್ದ. ಜಮೀನು ಮಾರಾಟದಿಂದ ಬಂದಿದ್ದ 1.30 ಲಕ್ಷ ರೂಪಾಯಿ ಹಣ ಹಂಚಿಕೆ ವಿಷಯಕ್ಕೆ ತಗಾದೆ ತೆಗೆದಿದ್ದ ಮೊದಲ ಹೆಂಡತಿಯ ಪುತ್ರರು. ಆದರೆ ಹಣ ಹಂಚಿಕೆ ಮಾಡಲು ಒಪ್ಪಿರಲಿಲ್ಲ.
BREAKING: ‘ರಾಜ್ಯ ಸರ್ಕಾರ’ದಿಂದ ಎಲ್ಲಾ ‘ಸಹಕಾರ ಸಂಘ, ಬ್ಯಾಂಕು’ಗಳ ‘ಚುನಾವಣೆ ಮುಂದೂಡಿಕೆ’ ಮಾಡಿ ಆದೇಶ
ಹೀಗಾಗಿ ಎರಡನೇ ಪತ್ನಿ ರೇಖಾ ಜಮೀನಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿರುವ ಪುತ್ರರು. ಮನೆಯೊಳಗೆ ಕೂಡಿಹಾಕಿ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ವಿವೇಕಾನಂದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.