ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಈಗಾಗಲೇ ಆದೇಶ ಮಾಡಲಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ( Karnataka Government Employees ) ಸಿಹಿಸುದ್ದಿ ಎನ್ನುವಂತೆ ತುಟ್ಟಿಭತ್ಯೆಯನ್ನು ( Dearness Allowance -DA ) ಶೇ.38.75ರಿಂದ ಶೇ.42.5ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಇಂದು ಸಿಎಂ ಸಿದ್ಧರಾಮಯ್ಯ ಅವರ ಕಚೇರಿಯಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ.38.75ರಿಂದ ಶೇ.42.5ಕ್ಕೆ ಪರಿಷ್ಕರಿಸಲು ಅನುಮೋದನೆ ನೀಡಲಾಗಿದೆ ಎಂದಿದೆ.
ಕೇಂದ್ರ ವೇತನ ಶ್ರೇಣಿ ಪಡೆಯುವ ನೌಕರರ ಡಿಎಯನ್ನು ಶೇಕಡಾ 46 ರಿಂದ 50 ಕ್ಕೆ ಪರಿಷ್ಕರಿಸಲಾಗುವುದು. ಇದು ವರ್ಷಕ್ಕೆ 1792.71 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, 2018ರ ಪರಿಷ್ಕೃತ ತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜನವರಿ 2024 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 38.75 ರಿಂದ ಶೇಕಡ 42.5 ಗೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ.
ಬೆಂಗಳೂರಲ್ಲಿ ‘ಪೊಲೀಸ್ ಠಾಣೆ’ಗೂ ತಟ್ಟಿದ ನೀರಿನ ಅಭಾವದ ಎಫೆಕ್ಟ್: ಇಲಾಖೆ ವಾಹನದಲ್ಲಿ ‘ನೀರಿನ ಕ್ಯಾನ್’ ಸಾಗಾಟ
ʻಭಾರತೀಯ ಪೌರತ್ವʼಕ್ಕಾಗಿ ಅರ್ಜಿ ಸಲ್ಲಿಸಲು ಈ ವೆಬ್ ಸೈಟ್ ಗೆ ಭೇಟಿ ನೀಡಿ | Indian citizenship