ಚಿಕ್ಕಮಗಳೂರು : ಹಣಕ್ಕಾಗಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಶಿಕ್ಷಿ ವಿಧಿಸಿದೆ.
ಚಿಕ್ಕಮಗಳುರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಹಣಕ್ಕಾಗಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಬಂಧಿಸಿದಂತೆ ಬಾಲಕಿಯ ತಾಯಿ ಸೇರಿದಂತೆ ನಾಲ್ಕು ಜನರ ಮೇಲೆ ಆರೋಪ ಸಾಬೀತಾಗಿತ್ತು ಸಂತ್ರಸ್ತೆ ಬಾಲಕಿ ತಾಯಿ ಗೀತಾ ಮತ್ತು ಆಕೆಗೆ ಸಹಾಯ ಮಾಡಿದ್ದ ಗಿರೀಶ್, ದೇವಿಶರಣ್, ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ ತಲಾ 25 ಸಾವಿರ ದಂಡ ಹಾಗೂ 20 ವರ್ಷ ಜೈಲು ಶಿಕ್ಷೆ ಕೋರ್ಟ್ ಆದೇಶ ಹೊರಡಿಸಿದೆ.
ನಾಲ್ಕು ಜನರನ್ನು ದೋಷಿ ಎಂದು ಚಿಕ್ಕಮಗಳೂರು ತ್ವರಿತ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, 53 ಜನರ ಪೈಕಿ 49 ಜನರನ್ನ ಪ್ರಕರಣದಿಂದ ಖುಲಾಸೆಗೊಳಿಸಿತ್ತು. 2020ರ ಸೆಪ್ಟೆಂಬರ್ 1 ರಿಂದ 2021ರ ಜನವರಿ 27ರ ವರೆಗೂ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿತ್ತು 2021ರಲ್ಲಿ ಪೊಲೀಸರು ದಾಳಿ ಮಾಡಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದರು.