ಕೊಚ್ಚಿ: ಕೇರಳ ಸರ್ಕಾರಕ್ಕೆ ಅನಾಥ ಶವಗಳಿಂದಲೇ ಕೋಟಿಗಟ್ಟಲೆ ಆದಾಯ ಬರುತ್ತಿರುವ ಮಾಹಿತಿ ಬಹಿರಂಗಗೊಂಡಿದೆ. ಕೇರಳ ಸರ್ಕಾರ 2008ರಿಂದ ಇದುವರೆಗೆ 1,122 ಅನಾಥ ಶವಗಳಿಂದ 3.66 ಕೋಟಿ ರೂ. ಆದಾಯ ಗಳಿಸಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
BREAKING: ರಾಜ್ಯದಲ್ಲಿ ಇನ್ಮುಂದೆ ‘ ಕಲರ್ ಕಾಟನ್ ಕ್ಯಾಂಡಿ’ ಬ್ಯಾನ್! ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ಅನಾಥ ಶವಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಬೋಧನೆ ಸಲುವಾಗಿ ಮಾರಾಟ ಮಾಡುವ ಮೂಲಕ ಈ ಆದಾಯ ಗಳಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಅನಾಥ ಶವಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಅಧ್ಯಯನ ಸಲುವಾಗಿ ನೀಡಲು ಅವಕಾಶ ಕಲ್ಪಿಸಿ 2008ರಲ್ಲಿ ಸರ್ಕಾರ ನೀಡಿದ್ದ ಆದೇಶದ ಮೇರೆಗೆ ಈ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ರಾಜ್ಯಾಧ್ಯಂತ ‘ಕಲರ್ ಕಾಟನ್ ಕ್ಯಾಂಡಿ’ ನಿಷೇಧ- ‘ಸಚಿವ ದಿನೇಶ್ ಗುಂಡೂರಾವ್’ ಘೋಷಣೆ
ಎಂಬಾಮ್ (ಸಂರಕ್ಷಣೆ) ಮಾಡಿರುವ ಶವವನ್ನು 40 ಸಾವಿರ ರೂ. ಎಂಬಾಮ್ ಮಾಡಿರದ ಶವ 20 ಸಾವಿರ ರೂ. ಗೆ ನೀಡಲಾಗುತ್ತಿದೆ. ಕಳೆದ 16 ವರ್ಷಗಳಲ್ಲಿ ಎರ್ನಾಕುಲಂ ಜನರಲ್ ಆಸ್ಪತ್ರೆಯಿಂದ ಅತ್ಯಧಿಕ (599) ಅನಾಥ ಶವಗಳನ್ನು ಖಾಸಗಿ ಆಸ್ಪತ್ರೆಗೆ ನೀಡಲಾಗಿದೆ. ರೂಲ್ ಬುಕ್ ಪ್ರಕಾರ 60 ವಿದ್ಯಾರ್ಥಿಗಳು ಇರುವ ಮೆಡಿಕಲ್ ಕಾಲೇಜಿಗೆ ಅಧ್ಯಯನಕ್ಕಾಗಿ 5 ಶವಗಳ ಅಗತ್ಯವಿದೆ.