ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಬಿಜೆಪಿಯ ಪಕ್ಷದಲ್ಲೇ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ನಾಯಕರು ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಶೋಭ ಗೋ ಬ್ಯಾಕ್ ಎಂಬ ಅಭಿಯಾನ ಕೈಗೊಂಡಿದ್ದರು ಇದರ ಬೆನ್ನಲ್ಲೇ ಇದೀಗ ಡಿವಿ ಸದಾನಂದ ಗೌಡಗೆ ಕೂಡ ಸಂಕಷ್ಟ ಎದುರಾಗಿದೆ.
BREAKING : ರಾಮನಗರ : 25 ಮನುಷ್ಯರ ‘ತಲೆಬುರುಡೆ’ ಸಂಗ್ರಹಿಸಿ ಮಾಟ ಮಂತ್ರ : ಆರೋಪಿ ವಶಕ್ಕೆ
ಹೌದು ಡಿವಿ ಸದಾನಂದ ಗೌಡರಿಗೆ ಎಂಪಿ ಟಿಕೆಟ್ ನೀಡಿದಂತೆ ಒತ್ತಾಯ ಕೇಳಿಬಂದಿದ್ದು, ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರಿಂದ ಈ ಮಾತು ಕೇಳಿಬಂದಿದೆ. ಇದೀಗ ಡಿವಿ ಸದಾನಂದ ಗೌಡ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.ಏನಾದರೂ ಸದಾನಂದ ಗೌಡರಿಗೆ ಟಿಕೆಟ್ ಕೊಟ್ಟರೆ ಮತ ಹಾಕಲ್ಲ ಎಂದು ಮುಖಂಡರು ಕಿಡಿಕಾರಿದ್ದಾರೆ.
ಬೆಂಗಳೂರು : ಇನ್ನುಮುಂದೆ ಬೋರೆಲ್ ಕೊರೆಯಲು ಅನುಮತಿ ಕಡ್ಡಾಯ : ನಿಯಮ ಮೀರಿದರೆ ಕಠಿಣ ಕ್ರಮ
ಸದಾನಂದಗೌಡರಿಗೆ ಒಂದು ವೇಳೆ ಟಿಕೆಟ್ ನೀಡಿದರೆ ನಾವು ನೋಟಾಗೆ ಮತ ಹಾಕುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸದ್ಯ ಡಿವಿ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಅಲ್ಲದೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಕೂಡ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಅಭಿಯಾನ ಮುಂದುವರಿಸಿದ್ದಾರೆ.