ರಾಮನಗರ : ವ್ಯಕ್ತಿಯೊಬ್ಬ ತೋಟದ ಮನೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನುಷ್ಯರ ತಲೆ ಬುರುಡೆಗಳನ್ನು ಸಂಗ್ರಹಿಸಿ ಮಾಟ ಮಂತ್ರ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಘಟನೆಯು ರಾಮನಗರ ತಾಲೂಕಿನ ಬಿಡದಿಯ ಜೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು : ಇನ್ನುಮುಂದೆ ಬೋರೆಲ್ ಕೊರೆಯಲು ಅನುಮತಿ ಕಡ್ಡಾಯ : ನಿಯಮ ಮೀರಿದರೆ ಕಠಿಣ ಕ್ರಮ
ತೋಟದ ಮನೆಯಲ್ಲಿ ಮನುಷ್ಯರ ತಲೆ ಬುರುಡೆಗಳನ್ನು ಸಂಗ್ರಹಸಿ ಬಲರಾಮ್ ಎನ್ನುವ ವ್ಯಕ್ತಿ ಮಾಟ ಮಂತ್ರ ಮಾಡುತ್ತಿದ್ದ ಎನ್ನಲಾಗುತ್ತಿದೆ.ಈ ಬಗ್ಗೆ 25ಕ್ಕೂ ಹೆಚ್ಚು ಮನುಷ್ಯರ ತಲೆ ಬುರುಡೆ ನೋಡಿ ಜನ ಶಾಕ್ ಆಗಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಮನಿ ಬಳಿಯ ಜೋಗನಹಳ್ಳಿ ಎಂಬಲ್ಲಿ ಈ ಒಂದು ದೃಶ್ಯ ಕಂಡು ಬಂದಿದೆ.
ಬಲರಾಮ್ ಎಂಬ ವ್ಯಕ್ತಿ ಈ ಒಂದು ತಲೆಬುರುಡೆಗಳನ್ನು ಸಂಗ್ರಹಿಸಿರುವ ಆರೋಪ ಕೇಳಿ ಬಂದಿದ್ದು, ಬಲರಾಮ ಮಾಟ ಮಂತ್ರ ಮಾಡುತ್ತಾನೆ ಎಂದು ಜನರು ಆರೋಪಿಸುತ್ತಿದ್ದಾರೆ. ಬಲರಾಮ ವಿರುದ್ಧ ಇದೀಗ ಜೋಗನಹಳ್ಳಿ ಗ್ರಾಮಸ್ಥರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾತ್ರಿಯ ವೇಳೆ ಬಲರಾಮದಲ್ಲಿ ಪೂಜೆ ಮಾಡುತ್ತಿದ್ದ ಎಂದು ಜನರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ಗ್ರಾ. ಕ್ಷೇತ್ರಕ್ಕೆ ಡಾ ಮಂಜುನಾಥ್ ಸ್ಪರ್ಧೆ ಫಿಕ್ಸ್ : ಮನವೊಲಿಸುವಲ್ಲಿ ಯಶಸ್ವಿಯಾದ HD ಕುಮಾರಸ್ವಾಮಿ
ಈ ಕುರಿತಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.ಸಾರ್ವಜನಿಕರ ದೂರಿನ ಮೇರೆಗೆ ಇದೀಗ ಬಲರಾಮನನ್ನು ಅರೆಸ್ಟ್ ಮಾಡಲಾಗಿದೆ. 25ಕ್ಕೂ ಹೆಚ್ಚು ತಲೆ ಬುರುಡೆಗಳನ್ನು ಬಲರಾಮ ಸಂಗ್ರಹಿಸಿದ್ದ ಎನ್ನಲಾಗಿದೆ. ಬಲರಾಮನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.