ಮಂಡ್ಯ : ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಬಿಟ್ಟ ಕಾರಣಕ್ಕೆ ಮಂಡ್ಯದಲ್ಲಿ ರೈತರು ಕಪು ಬಾವುಟ ಪ್ರದರ್ಶಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸ್ತಿದ್ದ ಕಾವೇರಿ ಹೋರಾಟಗಾರರನ್ನು ಬಂಧಿಸಲಾಯಿತು.
ರೈತ ನಾಯಕಿ ಸುನಂದಾ ಜಯರಾಂ,ಮಾಜಿ ಪರಿಷತ್ ಸದಸ್ಯ, ಕೆ.ಟಿ.ಶ್ರೀಕಂಠೇಗೌಡ,ಕನ್ನಡ ಸೇನೆ ಮಂಜು ಸೇರಿದಂತೆ ಹಲವು ರೈತ ಸಂಘದ ಕಾರ್ಯಕರ್ತರ ಬಂಧನವಾಗಿದೆ.ಇದೆ ವೇಳೆ ಬಂಧನದ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
KRS ನಿಂದ ಕಾವೇರಿ ನದಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳಿಂದ ಹೋರಾಟ ನಡೆಸಲಾಗುತ್ತಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹೋರಾಟ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿಯೂ ನದಿಗೆ ನೀರು ಹರಿಸಲಾಗ್ತಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಜನ ಜಾನುವಾರುಗಳಿಗೆ ಅನ್ಯಾಯವಾಗಿದೆ. ನಮ್ಮ ನೀರು ರಕ್ಷಸೋಣ ಎಂಬ ಸ್ಲೋಗನ್ ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ಹಳೆ ಬೆ-ಮೈ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೆ ನೀರು ಹರಿಸೋದನ್ನ ನಿಲ್ಲಿಸುವಂತೆ ಒತ್ತಾಯ ಪಡಿಸಿದ್ದು, ರಸ್ತೆ ತಡೆಯಿಂದ ಹಳೆ ಬೆಂ-ಮೈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಕಪ್ಪು ಬಾವುಟ ಪ್ರದರ್ಶನ ಮೂಲಕ ಸರ್ಕಾರದ ವಿರುದ್ದ ಘೋಷಣೆ ಕೂಗಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟ ಗಾರರನ್ನು ಬಂಧಿಸಿ ಬಸ್ಸಿನಲ್ಲಿ ಪೊಲೀಸರು ಕರೋದೋಯ್ದರು. ಸಿ.ಎಂ.ಸಮಾವೇಶಕ್ಕೆ ಅಡ್ಡಿಯಾಗುತ್ತದೆಂದು ಕಾವೇರಿ ಹೋರಾಟಗಾರರನ್ನು ಬಂಧಿಸಿದ , ಪೊಲೀಸರ ನಡೆಗೆ ಹೋರಾಟಗಾರರ ಆಕ್ರೋಶ ವ್ಯಕ್ತಪಡಿಸಿದರು.