ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನತೆ ನೀರು ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ಇಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 12:30ಕ್ಕೆ ನೀರಿಗಾಗಿ ಕಣ್ಣೀರು ಚಳುವಳಿ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
‘ಬರ ನಿರ್ವಹಣೆ’ಯಲ್ಲಿ ರಾಜ್ಯ ಸರ್ಕಾರ ವಿಫಲ : ನಾಳೆ ಕಾಂಗ್ರೆಸ್ ವಿರುದ್ಧ ‘ಬಿಜೆಪಿ’ ಧರಣಿ
ಈ ಕುರಿತಂತೆ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೆ.ಆರ್.ಎಸ್. ಖಾಲಿ ಆಗಿದೆ. ನೀರೆಲ್ಲಾ ತಮಿಳುನಾಡಿಗೆ ಹೋಯ್ತು, ಹೇಳುವವರಿಲ್ಲ, ಕೇಳುವವರಿಲ್ಲ, ಬೆಂಗಳೂರು ಜನ ಬೀದಿಗೆ ಬರಲಿಲ್ಲ. ನೀರಿನ ಪರಿಸ್ಥಿತಿ ಜನರಿಗೆ ಈಗ ಗೊತ್ತಾಗ್ತಾ ಇದೆ ಎಂದು ಸರ್ಕಾರ ಹಾಗೂ ಕಾವೇರಿ ನೀರು ಪ್ರಾಧಿಕಾರ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
BREAKING:’ವಿಶ್ವ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ ಪಿಸ್ಕೋವಾ | Miss World 2024
ನಮ್ಮ ಮನವಿಯನ್ನು ತಿರಸ್ಕಾರ ಮಾಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಯಥೇಚ್ಛವಾಗಿ ನೀರು ಬಿಟ್ರು. ಈಗ ನಮಗೆ ಕಣ್ಣೀರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿಯ ಮೇಲೆ ತೀವ್ರವಾಗಿ ಮೊಕದ್ದಮೆ ಹಾಕಲೇಬೇಕು ಎಂದು ಅವರು ಅಗ್ರಹಿಸಿದ್ದಾರೆ.
ಸಿಬ್ಬಂದಿಗಳಿಗೆ ‘ಕಿರುಕುಳ’ ತಪ್ಪಿಸಲು ನೂತನ ಪ್ರಯೋಗಕ್ಕೆ ಮುಂದಾದ ‘KSRTC’ : ರಜೆ, ಹಾಜರಾತಿಗೆ ‘HRMS’ ಜಾರಿ