ಬೆಂಗಳೂರು : ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ‘ಕಿರುಕುಳ’ ತಪ್ಪಿಸಲು ನೂತನ ಪ್ರಯೋಗಕ್ಕೆ ಮುಂದಾದ ‘KSRTC’ : ರಜೆ, ಹಾಜರಾತಿಗೆ ‘HRMS’ ಜಾರಿ
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಆರಂಭವಾಗಿದ್ದರೂ, ಕಾಂಗ್ರೆಸ್ ಸರ್ಕಾರ ಕುಂಭಕರ್ಣನ ನಿದ್ರೆ ಮಾಡುತ್ತಿದೆ. ಬರಗಾಲದ ಪರಿ ಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟಿಸಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಕಳೆದ ಐದು ತಿಂಗಳಿನಿಂದ ಜನತೆ ಬರಗಾಲದ ನೋವನ್ನು ಅನುಭವಿಸುತ್ತಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ. ಬರಗಾಲಪೀಡಿತ ಎಂದು ಘೋಷಿ ಸುವ ಮೊದಲು ಅಳೆದೂತೂಗಿ ಮೂರು ತಿಂಗಳು ಮುಂದೆ ಹಾಕಿದ್ದರು ಎಂದರು.
ಬೆಂಗಳೂರು : ‘ವಾಟರ್ ಟ್ಯಾಂಕರ್’ ಮಾಲೀಕರಿಗೆ ಸಿಹಿಸುದ್ದಿ : ನೋಂದಣಿ ಅವಧಿ ‘ಮಾ.15’ರವರೆಗೆ ವಿಸ್ತರಣೆ
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬಮಾಡಿದರು ಎಂದು ಟೀಕಿಸಿದರು.ರಾಜ್ಯದಲ್ಲಿ ಜನರು ಗುಳೆ ಹೋಗುತ್ತಿದ್ದಾರೆ ಎಂದರೆ ಸರ್ಕಾರ ಒಪ್ಪುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಬಹುತೇಕ ಮನೆ ಗಳಿಗೆ ಬೀಗ ಹಾಕಲಾಗುತ್ತಿದೆ ಎಂದರು.ಯಾವುದೇ ಖಾಸಗಿ ಬೋರ್ವೆಲ್ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಅದನ್ನು ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲದಿರುವುದರಿಂದ ಟ್ಯಾಂಕರ್ಗಳು ಕಾಳಸಂತೆ ಸೃಷ್ಟಿಸಿವೆ ಎಂದರು.
ಸಾರ್ವಜನಿಕರೇ ಗಮನಿಸಿ: ಇಂದಿನಿಂದ ರಾಜ್ಯದಲ್ಲಿ 10 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ, ಬಿಲ್ ಪಾವತಿಯೂ ಇಲ್ಲ