ಬೆಂಗಳೂರು : ಇಲ್ಲಿಯವರೆಗೂ KSRTC ಘಟಕ ಮತ್ತು ವಿಭಾಗದ ಮುಖ್ಯಸ್ಥರು ರಜೆ ನೀಡುವಲ್ಲಿ ಕಿರುಕುಳ ನೀಡುತ್ತಾರೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ನೌಕರರು ಆಗ್ರಹಿಸುತ್ತಿದ್ದರು.ಇದೀಗ ಸಿಬ್ಬಂದಿಗೆ ರಜೆ ನೀಡುವ ವಿಚಾರದಲ್ಲಿ ಆಗುತ್ತಿರುವ ಕಿರುಕುಳ ತಪ್ಪಿಸಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್ಆರ್ ಎಂಎಸ್) ಜಾರಿಗೆ ತರಲಾಗಿದೆ.
ಬೆಂಗಳೂರು : ‘ವಾಟರ್ ಟ್ಯಾಂಕರ್’ ಮಾಲೀಕರಿಗೆ ಸಿಹಿಸುದ್ದಿ : ನೋಂದಣಿ ಅವಧಿ ‘ಮಾ.15’ರವರೆಗೆ ವಿಸ್ತರಣೆ
ಈವರೆಗೆ ಹಾಜರಾತಿ ನಮೂದು ಹಾಗೂ ರಜೆ ನೀಡುವ ವ್ಯವಸ್ಥೆಯು ಮ್ಯಾನ್ಯುಯಲ್ ಆಗಿ ನಡೆಯುತ್ತಿತ್ತು. ಇದರಿಂದ ಘಟಕ ಮತ್ತು ವಿಭಾಗದ ಮುಖ್ಯಸ್ಥರು ರಜೆ ನೀಡುವಲ್ಲಿ ಕಿರುಕುಳ ನೀಡುತ್ತಾರೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ನೌಕ ರರು ಆಗ್ರಹಿಸುತ್ತಿದ್ದರು. ಹೀಗಾಗಿಯೇ ಕೆಎಸ್ಸಾರ್ಟಿಸಿಗಾಗಿಯೇ ಎಚ್ಆರ್ಎಂಎಸ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
ಸಾರ್ವಜನಿಕರೇ ಗಮನಿಸಿ: ಇಂದಿನಿಂದ ರಾಜ್ಯದಲ್ಲಿ 10 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ, ಬಿಲ್ ಪಾವತಿಯೂ ಇಲ್ಲ
ಇನ್ನು ಮುಂದೆಹಾಜರಾತಿ ಹಾಗೂ ರಜೆತೆಗೆದುಕೊಳ್ಳುವ ವ್ಯವಸ್ಥೆಯನ್ನು ಎಚ್ಆರ್ಎಂಎಸ್ ಮೂಲಕವೇ ನಿರ್ವಹಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಕೇಂದ್ರೀಯ, ಹಾಸನ, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ವಿಭಾಗ ವ್ಯಾಪ್ತಿಯಲ್ಲಿ ಮಾತ್ರ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದ್ದು, ಅದರ ಬಳಕೆ ಹಾಗೂ ಕಾರ್ಯದಕ್ಷತೆ ಆಧರಿಸಿ ಉಳಿದ 11 ವಿಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.
2024ರ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ
ನಿಗದಿತ 5 ವಿಭಾಗ ವ್ಯಾಪ್ತಿಯಲ್ಲಿ ಮಾ.1ರಿಂದ ಎಚ್ಆರ್ಎಂಎಸ್ ಕಡ್ಡಾಯಗೊಳಿಸಲಾಗಿದೆ. ಆ ವಿಭಾಗಗಳಲ್ಲಿ ಪ್ರತಿದಿನದ ಹಾಜರಾತಿಯನ್ನು ಸಿಬ್ಬಂದಿ ಎಚ್ಆರ್ಎಂಎಸ್ ತಂ ತ್ರಾಂಶದಲ್ಲಿಯೇ ನಮೂದಿಸಬೇಕಿದೆ. ತಮಗೆ ಯಾವ ದಿನ ರಜೆ ಬೇಕು ಎಂಬುದನ್ನು ತಂತ್ರಾಂಶದಲ್ಲಿಯೇ ನಮೂದಿಸಬೇಕು. ಅದನ್ನಾಧರಿಸಿ
ವಿಭಾಗಮತ್ತು ಘಟಕ ಮುಖ್ಯಸ್ಥರು ಸಿಬ್ಬಂದಿ ರಜೆ ಹಂಚಿಕೆ ಮಾಡಲು ಸಹಾಯವಾಗಲಿದೆ.