ಬಳ್ಳಾರಿ : ಬೆಂಗಳೂರಿನಲ್ಲಿ ಕೆಫೆ ಬಾಂಬೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಂಐ ಏ ಅಧಿಕಾರಿಗಳು ಬಳ್ಳಾರಿಯ ಸೈಯದ್ ಸಮೀರ್ ಸಹಚರರು, ಸುಲೇಮಾನ್ ಸಹಚರರು ಹಾಗೂ ಮುನೀರ್ ಸಹಚರರು ಸೇರಿದಂತೆ ಒಟ್ಟು 17 ಜನರನ್ನು ವಿಚಾರಣೆಗೆ ಒಳಪಡಿಸಿದೆ.ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದೆ ಎನ್ನಲಾದ, ಸಯ್ಯದ್ ಸಮೀರ್, ಸುಲೇಮಾನ್ ಹಾಗೂ ಮುನೀರ್ ಸಹಚರರನ್ನು NIA ಅಧಿಕಾರಿಗಳು ಇದೀಗ ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್: ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿ!
ಕಲಬುರ್ಗಿಗೆ NIA ತಂಡ
ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡ ಈಗ ಬಳ್ಳಾರಿ ನಂತರ ಕಲಬುರ್ಗಿಗೆ ತರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಬಳ್ಳಾರಿಯಿಂದ ಕಲಬುರ್ಗಿಗೆ ತೆರಳಿದ NIA ಅಧಿಕಾರಿಗಳ ತಂಡವು, ಬಳ್ಳಾರಿಯಲಿ ಶಂಕಿತ ಉಗ್ರನನ್ನು ಆಟೋದಲ್ಲಿ ಕೂಡಿಸಿಕೊಂಡು ಬಸ್ಟ್ಯಾಂಡಿಗೆ ಬಿಟ್ಟಿದ್ದ, ಆಟೋ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದರು.
BREAKING : ರಾಮೇಶ್ವರಂ ‘ಕೆಫೆ ಬಾಂಬ್’ ಬ್ಲಾಸ್ಟ್ ಕೇಸ್ : ಬಳ್ಳಾರಿಯಿಂದ ಕಲಬುರ್ಗಿಗೆ ತೆರಳಿದ ‘NIA’ ಟೀಂ
ಇದೀಗ ಆಟೋ ಚಾಲಕನ ಮಾಹಿತಿಯನ್ನು ಆಧರಿಸಿ ಇದೀಗ NIA ಕಲಬುರ್ಗಿಗೆ ಪ್ರಯಾಣ ಬೆಳೆಸಿದೆ.ಕಲ್ಬುರ್ಗಿಯತ್ತ ಅಧಿಕಾರಿಗಳ ತಂಡ ಇದೀಗ ತೆರಳಿದೆ ಎಂದು ತಿಳಿದುಬಂದಿದೆ. ಬಾಂಬ್ ಬಸ್ ನಿಲ್ದಾಣದಲ್ಲಿ ಆಟೋದಲ್ಲಿ ತೆರಳಿದ್ದ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಾಂಬರ್ ಆಟೋ ಹತ್ತಿ ಹೋಗಿದ್ದ ತದನಂತರ ಅಲ್ಲಿಂದ ಬುಡ ಕಾಂಪ್ಲೆಕ್ಸ್ ನಲ್ಲಿ ಬಾಂಬರ್ ಉಳಿದಿದ್ದ ಎನ್ನಲಾಗಿದೆ.
ಬೆಳಗಾವಿ : ಜೈ ಮಹಾರಾಷ್ಟ್ರ ಎಂದವನಿಗೆ ಬುದ್ಧಿವಾದ ಹೇಳಿದಕ್ಕೆ ಉದ್ಯಮಿ ಮೇಲೆ ‘MES’ ಪುಂಡರ ಗೂಂಡಾಗಿರಿ
ಈ ವೇಳೆ ಎನ್ ಐ ಏ ಅಧಿಕಾರಿಗಳ ತಂಡ ಬಳ್ಳಾರಿಯಲ್ಲಿರುವ ಬುಡಕಾಂಪ್ಲೆಕ್ಸ್ ನ ಪ್ರತಿಯೊಂದು ಸಿ ಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಅಲ್ಲಿಂದ ನಂತರ ಕಲಬುರ್ಗಿಗೆ ಬಸ್ ಹತ್ತಿ ಹೋಗಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ. ಇದೀಗ ಬಸ್ ನಿಲ್ದಾಣದ ಸಿಸಿಟಿವಿ ಆಧರಿಸಿ ಉಗ್ರನ ಪತ್ತೆಗೆ ಕಲ್ಬುರ್ಗಿಗೆ NIA ತಂಡ ತೆರಳಿದೆ ಎಂದು ತಿಳಿದುಬಂದಿದೆ.