ಚಿಕ್ಕಮಗಳೂರು : ಜಿಲ್ಲಾಡಳಿತದಿಂದ ಬಜರಂಗದಳ ಕಾರ್ಯಕರ್ತನಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದೆ.ಚಿಕ್ಕಮಂಗಳೂರು ಜಿಲ್ಲಾ ಘಟಕದ ಬಜರಂಗದಳದ ಮಾಜಿ ಸಂಚಾಲಕರಾಗಿದ್ದರು ಎಂದು ತಿಳಿದುಬಂದಿದೆ.
BREAKING : ‘ಕೆಫೆ ಬಾಂಬ್’ ಬ್ಲಾಸ್ಟ್ ಕೇಸ್ : ಉಗ್ರ ತೆರಳಿದ ಆಟೋ ಚಾಲಕನ ವಿಚಾರಣೆ ನಡೆಸುತ್ತಿರುವ ‘NIA’
ತುಡಕೂರು ಮಂಜುಗೆ ಜಿಲ್ಲಾಡಳಿತ ಗಡಿಪಾರು ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ. ತುಡಕೂರು ಮಂಜು ಚಿಕ್ಕಮಂಗಳೂರು ಜಿಲ್ಲಾ ಘಟಕದ ಬಜರಂಗದಳದ ಮಾಜಿ ಸಂಚಾಲಕರಾಗಿದ್ದರು.ಅಲ್ಲದೆ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 17 ಕಾರಣಗಳನ್ನು ನೀಡಿ ಇದೀಗ ಚಿಕ್ಕಮಂಗಳೂರು ಜಿಲ್ಲಾಡಳಿತ ಅವರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದೆ.
ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಸುಪ್ರೀಂ ಕೋರ್ಟ್ ಮುಕ್ತಿ
ಅಲ್ಲದೆ ಮಾರ್ಚ್ 14 ರಂದು ಜಿಲ್ಲಾಧಿಕಾರಿಗಳ ಎದುರು ಹಾಜರಾಗಲು ಸೂಚನೆ ನೀಡಿದೆ. ಸಂಘಟನೆ ಹೋರಾಟದಲ್ಲಿ ತುಡಕೂರು ಮಂಜು ವಿರುದ್ಧ 24 ಕೇಸ್ಗಳಿವೆ. 24 ಕೇಸ್ ಗಳ ಪೈಕಿ 22 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ಇದೀಗ ಜಿಲ್ಲಾಡಳಿತ ನೀಡಿದ ನೋಟಿಸ್ ಬಾರಿ ಚರ್ಚೆಗೆ ಕಾರಣವಾಗಿದೆ.