ಚಿಕ್ಕಬಳ್ಳಾಪುರ : ಸಂಬಂಧಿ ಯುವಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿರುವ ಏಳನೇ ತರಗತಿ ಬಾಲಕಿಯು ಇದೀಗ 6 ತಿಂಗಳ ಗರ್ಭಿಣಿ ಆಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿಯಾಗಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಈ ಕೃತ್ಯ ನಡೆದಿದೆ. ಸಂಬಂಧಿ ಯುವಕನೇ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿದೆ. ಓದುವ ವಯಸ್ಸಿನಲ್ಲಿ ಗರ್ಭಿಣಿಯಾದ ಅಪ್ರಾಪ್ತಯ ಸ್ಥಿತಿ ನೋಡಿ ಪೋಷಕರು ಕಂಗಾಲಾಗಿದ್ದಾರೆ.
ಮಾಲ್ಡೀವ್ಸ್ ಜನರಿಗೆ ‘ವಿಷಾದವಿದೆ’: ಭಾರತದೊಂದಿಗಿನ ಸಂಬಂಧ ಹದಗೆಡುತ್ತಿರುವ ಬಗ್ಗೆ ಮಾಜಿ ಅಧ್ಯಕ್ಷ
ಇದೀಗ ಬಾಲಕಿ ಯನ್ನು ಸರ್ಕಾರಿ ಬಾಲಮಂದಿರಲ್ಲಿ ಆರೈಕೆ ಮಾಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಿಸಲಾಗಿದೆ. 2024ರ ಜನವರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿಶಾಲೆಯಲ್ಲಿ ವಾಸವಿದ್ದ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು.
ರಸ್ತೆಯಲ್ಲಿ ‘ನಮಾಜ್’ ಮಾಡುತ್ತಿದ್ದ ಮುಸ್ಲೀಮರನ್ನು ಒದೆಯುತ್ತಿದ್ದ ಪೊಲೀಸ್ ಅಧಿಕಾರಿ ಅಮಾನತು