ಬೆಂಗಳೂರು : ರಂಜಾನ್ ಹಬ್ಬದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉರ್ದು ಕಿರಿಯ ಮತ್ತು ಹಿರಿಯ ಶಾಲೆಗಳಲ್ಲಿ ಅರ್ಧ ದಿನಗಳವರೆಗೆ ಮಾತ್ರ ಪಾಠ ಮಾಡುವಂತೆ ಸಮಯ ಬದಲಾಯಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಂಜಾನ್ ಆರಂಭವಾದ ದಿನದಿಂದ ಏ.10 ರವರೆಗೂ ಉರ್ದು ಮಾಧ್ಯಮ ಕಿರಿಯ, ಹಿರಿಯ, ಪ್ರೌಢಶಾಲೆಗಳಿಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45 ರವರೆಗೂ ಶಾಲೆಗಳ ಸಮಯ ನಿಗದಿ ಮಾಡಲಾಗಿದೆ. ಕಡಿತಗೊಳ್ಳುವ ಶಾಲಾ ಸಮಯವನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಪ್ರೇಮ ವೈಫಲ್ಯ : ಬೆಂಗಳೂರಲ್ಲಿ ‘ಪ್ರಿಯತಮೆ’ ಮನೆಯ ಎದುರೇ ‘ಚಾಕು’ ಇರಿದುಕೊಂಡು ಆಟೋ ಚಾಲಕ ‘ಆತ್ಮಹತ್ಯೆ’
ರಂಜಾನ್ ತಿಂಗಳಿನಲ್ಲಿ ಉಪವಾಸಮಾಡುವುದ ರಿಂದ ಅನುಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧೀನದ ಅಲ್ಪಸಂಖ್ಯಾತ ಭಾಷಾಶಾಲೆಗಳನಿರ್ದೇಶನಾಲಯಈಸುತ್ತೋಲೆ ಹೊರಡಿಸಿದೆ. ಉರ್ದು ಶಾಲೆಗಳ ಹೊರತಾಗಿ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ರಂಜಾನ್ ತಿಂಗಳಲ್ಲಿ ಪ್ರತಿ ದಿನ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯನಿರತ ಉರ್ದು ಮಾಧ್ಯಮ ಶಿಕ್ಷಕ ರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪ ಡಿಸಲಾಗಿದೆ. ಸಮಯ ಬದಲಾವಣೆ ಮಾಡುವಂತೆ ಕೆಲ ಜನಪ್ರತಿನಿಧಿಗಳು, ಉರ್ದು ಶಾಲಾ ಶಿಕ್ಷಕರ ಸಂಘ ಮತ್ತಿತರರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ.