ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಉಂಟಾಗಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮಹತ್ವದ ಮೈಲುಗಲ್ಲನ್ನು ತನಿಖಾ ತಂಡ ಎನ್ಐಎ ಸಾಧಿಸಿದೆ. ಈ ಪ್ರಕರಣ ಸಂಬಂಧ ಶಂಕಿತ ನಾಲ್ವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.
ಹೌದು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ನಾಲ್ವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು, ಮುಂಬೈ, ದೆಹಲಿಯಲ್ಲಿ ನಾಲ್ವರನ್ನು ವಶಕ್ಕೆ ಎನ್ಐಎ ಅಧಿಕಾರಿಗಳು ಪಡೆದಿದ್ದಾರೆ. ಮಿನಾಜ್ ಸೇರಿ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರನ್ನು ಬಳ್ಳಾರಿ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಹಾಗೂ ದೆಹಲಿಯ ಶ್ಯಾನ್ ರೆಹಮಾನ್ @ ಹುಸೇನ್ ಎಂಬುದಾಗಿ ತಿಳಿದು ಬಂದಿದೆ. ಅವರನ್ನು ತೀವ್ರ ವಿಚಾರಣೆಗೆ ಎನ್ಐಎ ಒಳಪಡಿಸಿದೆ.
ಅಂದಹಾಗೇ ಈ ಮೂವರು ಬಳ್ಳಾರಿಯ ಮಾಡ್ಯೂಲ್ ಕೇಸ್ ನ ನಾಲ್ವರು ಆರೋಪಿಗಳಾಗಿದ್ದಾರೆ. 2023 ಡಿಸೆಂಬರ್ 14ರಂದು ದಾಖಲಾಗಿದ್ದ ಪ್ರಕರಣದಲ್ಲಿ ಇವರು ಆರೋಪಿಗಳಾಗಿದ್ದಾರೆ.
ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ : ಅನಗತ್ಯ ನೀರು ಪೋಲು ಮಾಡಿದರೆ ಬೀಳುತ್ತೆ ಭಾರಿ ದಂಡ!
‘ಪಡಿತರ ಚೀಟಿ’ ಸಾರ್ವಜನಿಕ ವಿತರಣಾ ವ್ಯವಸ್ಥೆಗಾಗಿಯೇ ಹೊರತು ‘ವಿಳಾಸ ಪುರಾವೆ’ ಅಲ್ಲ – ಹೈಕೋರ್ಟ್ | Ration Card