ಬಳ್ಳಾರಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ಬಳ್ಳಾರಿಗೂ ನಂಟಿದೆ ಎಂಬ ಮಾಹಿತಿ ಅನ್ವಯ ಇದೀಗ ಎಂಐ ಅಧಿಕಾರಿಗಳು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರ ಸುಲೇಮಾನ್ ಅನ್ನು ಈಗಾಗಲೇ ಕಳೆದ ಎರಡು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.
ಯುವತಿ ಮೇಲೆ ಕಿರುತೆರೆ ನಟಿ ಲಕ್ಷ್ಮೀಯಿಂದ ಹಲ್ಲೆ ಆರೋಪ! ತನಿಖೆ ಮಾಡಲು ಜ್ಞಾನಭಾರತಿ ಪೊಲೀಸರ ಹಿಂದೇಟು!?
ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಂಐ ಅಧಿಕಾರಿಗಳು ಬಳ್ಳಾರಿ ನಗರದ ಎಸ್ ಎನ್ ಪೇಟೆಯ ಇನ್ನೊರ್ವ ಯುವಕನ ವಿಚಾರಣೆ ಕೂಡ ನಡೆಸಲಾಗುತ್ತಿದೆ. ನಿರಂತರ ಒಂದು ಗಂಟೆಯ ಕಾಲ ಅಧಿಕಾರಿಗಳು ಯುವಕನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಯಾರಿಗೆ ಜಾತಿ ಗೊತ್ತಿಲ್ಲವೋ ಅವರೇ ಜಾತ್ಯಾತೀತರು: ಸಿದ್ಧರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ಧಾಳಿ
ಸೈಯದ್ ಸಮೀರ್, ಸುಲೇಮಾನ್ ಜೊತೆ ಈ ಯುವಕ ನಂಟು ಹೊಂದಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ ಯುವಕನು ಕೋಮುಗಲಭೆ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿದೆ. ತೀವ್ರವಾಗಿ ವಿಚಾರಣೆ ನಡೆಸಿ NIA ಅಧಿಕಾರಿಗಳು ಯುವಕನನ್ನು ಬಿಟ್ಟು ಕಳುಹಿಸಿದ್ದಾರೆ. ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಕೇಸ್ ಗು ಬಳ್ಳಾರಿಗೂ ನಂಟಿರುವ ಮಾಹಿತಿ ಹಿನ್ನೆಲೆಯಲ್ಲಿ NIA ಅಧಿಕಾರಿಗಳು ಆರೋಪಿ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.