ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಆಳಂದ್ ಪಟ್ಟಣದಲ್ಲಿರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಇಂದು ಶಿವರಾತ್ರಿ ಹಬ್ಬದ ಅಂಗವಾಗಿ ಶ್ರೀ ರಾಘವ ಚೇತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ ಈ ನೆಲೆಯಲ್ಲಿ ಆಳಂದ್ ಪಟ್ಟಣದಲ್ಲಿ ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಿಗ್ಗೆ 6 ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ ಯಾವುದೇ ಅಹಿತಕರ ಘಟನೆ ನಡೆದಂತೆ ಮುಂಜಾಗ್ರತ ಕ್ರಮವಾಗಿ ಪಾಳಲ್ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಕಲ್ಬುರ್ಗಿ ಪೊಲೀಸ್ ವರಿಷ್ಠ ಅಧಿಕಾರಿ ಅಕ್ಷಯ್ ನೀಡಿದ್ದಾರೆ.
ಮುಂದಿನ ವಾರ ಭಾರತಕ್ಕೆ ‘ಭೂತಾನ್ ಪ್ರಧಾನಿ’ ಭೇಟಿ | Bhutan PM to visit India
ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅವಕಾಶ ನೀಡಬೇಕೆಂದು ಕೆಲ ಹಿಂದೂ ಕಾರ್ಯಕರ್ತರು ಕಲಬುರ್ಗಿ ಹೈಕೋರ್ಟ್ ವಿಭಾಗಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮುಸ್ಲಿಮರಿಗೆ 15 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಹಾಗೂ ಶಿವಲಿಂಗಕ್ಕೆ ಪೂಜಿ ಸಲ್ಲಿಸಲು ಹಿಂದೂಗಳಿಗೆ 15 ಜನರಿಗೆ ಅವಕಾಶ ನೀಡಿ ಕಲ್ಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠ ಅವಕಾಶ ನೀಡಿದೆ.
ಶಿವರಾತ್ರಿಯಂದೇ ‘ರಾಮೇಶ್ವರಂ ಕೆಫೆ’ ಪುನರಾರಂಭಕ್ಕೆ ಸಿದ್ಧತೆ : ನಾಳೆಯಿಂದ ಗ್ರಾಹಕರಿಗೆ ಮುಕ್ತ ಪ್ರವೇಶ
ಎರಡು ಸಮುದಾಯಕ್ಕೂ ಹೈಕೋರ್ಟ್ ವಿಭಾಗೀಯ ಪೀಠ ಅವಕಾಶ ನೀಡಿದೆ. ಮಧ್ಯಾಹ್ನ 12:30 ರಿಂದ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಿದ್ದು, 15 ಜನ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ನೀಡಲಾಗಿದ್ದು, ಅದೇ ರೀತಿಯಾಗಿ ಸಂಜೆ 4 ಗಂಟೆಯಿಂದ ಮದ್ಯರಾತ್ರಿಯವರೆಗೆ ಹಿಂದುಗಳಿಗೆ ಪೂಜೆಗೆ ಅವಕಾಶ ನೀಡಿದೆ.ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು 15 ಹಿಂದೂಗಳಿಗೆ ಅವಕಾಶ ನೀಡಿದೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಲಾಡ್ಲೆ ಮಾಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ.
ಸರ್ಕಾರದ ಯಾವುದೇ ನಿರ್ಧಾರವನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ: ಸುಪ್ರೀಂ ಕೋರ್ಟ್
ವಿವಾದಿತ ಲಾಡ್ಲೆ ಮಾಶಾಕ್ ದರ್ಗಾದ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಸುಮಾರು 1,500 ಪೊಲೀಸ್ ಸಿಬ್ಬಂದಿಗಳನ್ನು ಯೋಜನೆ ಮಾಡಲಾಗಿದೆ ಏಕೆಂದರೆ ಕಳೆದ ವರ್ಷ ಎ ಶಿವರಾತ್ರಿ ಸಂದರ್ಭದಲ್ಲಿ ಅಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು ಈ ಹಿನ್ನೆಲೆಯಲ್ಲಿ ಲಾಡ್ಲಿಮಶಾಕ್ ದರ್ಗಾದ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.