ಬೆಂಗಳೂರು:ದಕ್ಷಿಣ ಬೆಂಗಳೂರಿನ ಬಹುನಿರೀಕ್ಷಿತ ಯೆಲ್ಲೋ ಲೈನ್ ನಲ್ಲಿ ಚೀನಾ ನಿರ್ಮಿತ, ಚಾಲಕರಹಿತ ರೈಲನ್ನು ನಿಯೋಜಿಸುವ ಮೂಲಕ ನಮ್ಮ ಮೆಟ್ರೋ ಗುರುವಾರ ಸಂಜೆ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿತು.
ನೀರಿನ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ : ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ
ಪ್ರಾಯೋಗಿಕ ಓಟವು ವಾರಾಂತ್ಯದಲ್ಲಿ ಪ್ರಾರಂಭವಾಗಬೇಕಿತ್ತು.
ಹೆಬ್ಬಗೋಡಿ ಮೆಟ್ರೋ ಡಿಪೋದ ಇನ್ಸ್ಪೆಕ್ಷನ್ ಬೇ ಲೈನ್-1ರಿಂದ ಸಂಜೆ 6.55ಕ್ಕೆ ಹೊರಟ ರೈಲು ರಾತ್ರಿ 7.14ಕ್ಕೆ 1.3 ಕಿ.ಮೀ ದೂರದಲ್ಲಿರುವ ಬೊಮ್ಮಸಂದ್ರ ನಿಲ್ದಾಣ ತಲುಪಿತು. ಗಂಟೆಗೆ 10 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಗರಿಷ್ಠ 25 ಕಿ.ಮೀ ವೇಗವನ್ನು ತಲುಪಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ಸ್ವಲ್ಪ ಸಮಯದ ನಿಲುಗಡೆಯ ನಂತರ, ರೈಲು ರಾತ್ರಿ 8.05 ಕ್ಕೆ 12.5 ಕಿ.ಮೀ ದೂರದಲ್ಲಿರುವ ಬೊಮ್ಮನಹಳ್ಳಿ ಕಡೆಗೆ ಪ್ರಯಾಣ ಬೆಳೆಸಿತು. ಬಯೋಕಾನ್ ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಬೆರಟೆನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಯಿತು.
ನಂತರ ರೈಲು ಬೊಮ್ಮಸಂದ್ರಕ್ಕೆ ಹಿಂದಿರುಗಿ ರಾತ್ರಿ 9.11 ಕ್ಕೆ ತಲುಪಿತು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಚೀನಾದ ರೈಲು ತಯಾರಕ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ ಮತ್ತು ಬಿಎಂಆರ್ಸಿಎಲ್ನ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಟ್ರ್ಯಾಕ್ ನಿರ್ವಹಣಾ ಇಲಾಖೆಗಳ ಅಧಿಕಾರಿಗಳು ರೈಲಿನಲ್ಲಿದ್ದರು.
ತಂಡವು ಸಿಗ್ ಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಿತು.