ನವದೆಹಲಿ : ಹೋಳಿ ಹಬ್ಬಕ್ಕೂ ಮುನ್ನ ಮೋದಿ ಸರ್ಕಾರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಖಜಾನೆ ತೆರೆದಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇಕಡಾ 46 ರಿಂದ 50 ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದ್ರಂತೆ, ತುಟ್ಟಿಭತ್ಯೆಯನ್ನ ಜನವರಿ 1 ರಿಂದ ಜೂನ್ 30, 2024 ರವರೆಗೆ ಹೆಚ್ಚಿಸಲಾಗಿದೆ.
ಮಾರ್ಚ್ 7, 2024 ರ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿಭತ್ಯೆಯನ್ನ ಶೇಕಡಾ 46 ರಿಂದ 50ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 49 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ 3ನೇ ಗ್ಯಾರಂಟಿ’ ಘೋಷಣೆ: ಯುವ ಜನತೆಗೆ ನೌಕರಿಗಾಗಿ ‘ಯುವ ನ್ಯಾಯ’ ಯೋಜನೆ ಜಾರಿ
BREAKING: ರಾಜ್ಯದ 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್’ಗೆ ಅನುಮತಿ
ಭಲೇ ಬಾಲಕ ; ಚಿರತೆಯನ್ನ ಮನೆಯೊಳಗೆ ಬಂಧಿಸಿದ 12 ವರ್ಷದ ಹುಡುಗ, ವಿಡಿಯೋ ವೈರಲ್