ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದೇ ಮಾದರಿಯಲ್ಲೇ ದೇಶದಲ್ಲೂ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಸ್ಕೀಂ ಜಾರಿಗೊಳಿಸೋದಾಗಿ ಘೋಷಣೆ ಮಾಡಿದೆ. ಇಂದು ತನ್ನ 3ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು, ದೇಶದ ಯುವಜನತೆಗೆ ನೌಕರಿ ಖಾತ್ರಿ ನೀಡುವಂತ ಯುವ ನ್ಯಾಯ ಯೋಜನೆಯನ್ನು ಜಾರಿಗೊಳಿಸೋದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ದೇಶದಲ್ಲಿ 2024 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ, ದೇಶದ ಯುವಕರಿಗೆ ಉದ್ಯೋಗ ಖಾತರಿಯನ್ನು ಒದಗಿಸುವ ಮೂಲಕ ಹೊಸ ರೋಜ್ಗಾರ್ ಕ್ರಾಂತಿ ಪ್ರಾರಂಭವಾಗಲಿದೆ. ಇಂದು ಕಾಂಗ್ರೆಸ್ ಪಕ್ಷವು ಈ ದೇಶದ ಕೋಟ್ಯಂತರ ಯುವಕರಿಗಾಗಿ ದೊಡ್ಡ ಘೋಷಣೆ ಮಾಡುತ್ತಿದೆ ಎಂದಿದ್ದಾರೆ.
ಯುವ ನ್ಯಾಯ ಗ್ಯಾರಂಟಿ ಸ್ಕೀಂ 5 ಪ್ರಮುಖ ಅಂಶಗಳು
ಭಾರತಿ ಭರೋಸಾ
ನಾವು ದೇಶದ ಎಲ್ಲಾ ಯುವಕರಿಗೆ ಭಾರತಿ ಭರೋಸಾವನ್ನು ಖಾತರಿಪಡಿಸುತ್ತೇವೆ. ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪರೀಕ್ಷೆಯಿಂದ ನೇಮಕಾತಿಯವರೆಗೆ ಕಾಲಮಿತಿಯನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.
ಪೆಹಲಿ ನೌಕ್ರಿ ಪಕ್ಕಿ
ಪದವಿ ಪಡೆದ ನಂತರವೂ, ಸರಿಯಾದ ಅಪ್ರೆಂಟಿಸ್ಶಿಪ್ ತರಬೇತಿ ಇಲ್ಲದ ಕಾರಣ ಪ್ರತಿಯೊಬ್ಬರಲ್ಲಿ ಇಬ್ಬರು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಹೊಸ ಅಪ್ರೆಂಟಿಸ್ಶಿಪ್ ಹಕ್ಕು ಕಾನೂನನ್ನು ತರುವ ಮೂಲಕ ನಾವು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಅಥವಾ ಪದವಿ ಹೊಂದಿರುವವರಿಗೆ ಅಪ್ರೆಂಟಿಸ್ಶಿಪ್ ತರಬೇತಿಯನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಭರವಸೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಕ್ತಿ
ನೇಮಕಾತಿ ಪ್ರಕ್ರಿಯೆಯು ಸಮರ್ಪಕವಾಗಿ ದೇಶದಲ್ಲಿ ನಡೆಯುತ್ತಿಲ್ಲ. ನೇಮಕಾತಿ ಪ್ರಕ್ರಿಯೆ ನಡೆದರೂ ಪ್ರಶ್ನೆಪತ್ರಿಕೆ ಸೋರಿಕೆಯಂತ ಪಿಡುಗು ಇದ್ದೇ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಇದಕ್ಕೆ ಇತಿಶ್ರೀ ಹಾಡಲಾಗುವುದು. ನೇಮಕಾತಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಭಾರತ್ ಜೋಡೊ ಯಾತ್ರೆ ಮತ್ತು ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಹಲವಾರು ಗಿಗ್ ಕಾರ್ಮಿಕರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಟ್ರಕ್ ಚಾಲಕರು, ಮೆಕ್ಯಾನಿಕ್ಗಳು, ಮರದ ಕೆಲಸ ಮಾಡುವವರು, ಆಹಾರಗಳನ್ನು ಮನೆಬಾಗಿಲಿಗೆ ತಲುಪಿಸುವರು, ಟ್ಯಾಕ್ಸಿ ಚಾಲಕರು ಸೇರಿದಂತೆ ಸಮಾಜದಲ್ಲಿ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆ ಜಾರಿಗೆ ತರಲಾಗುವುದು.
ಯುವ ರೋಷಿನಿ
40 ವರ್ಷದೊಳಗಿನ ಯುವಕರು ತಮ್ಮದೇ ಸ್ಟಾರ್ಟ್ಅಪ್ ಆರಂಭಿಸಲು ನೆರವಾಗುವ ಉದ್ದೇಶದಿಂದ ₹5 ಸಾವಿರ ಕೋಟಿ ನಿಧಿಯನ್ನು ಸ್ಥಾಪಿಸಿ, ಅದರಿಂದ ಉದ್ಯಮಕ್ಕೆ ನೆರವು ಮತ್ತು ಉದ್ಯೋಗ ಸೃಜನೆಗೆ ನೆರವಾಗುವ ಯೋಜನೆ ಜಾರಿಗೆ ತರಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಮಾಡಿ ವಿವರಿಸಿದ್ದಾರೆ.
YUVA NYAY
As soon as the Congress Govt is formed in 2024, a new ROZGAR REVOLUTION will begin by providing EMPLOYMENT GUARANTEE to the Youth of the country.
Today, the Congress Party is making a big announcement for the crores of Youth of this country, which has 5 main points -… pic.twitter.com/04HmKkigvC
— Mallikarjun Kharge (@kharge) March 7, 2024
‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ