ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ನಾಶಿಪುಡಿಯನ್ನು ಪೊಲೀಸರು ಬೆಂಗಳೂರು 1ನೆ ACMM ಕೋರ್ಟಿಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಆರೋಪಿ ಮೊಹಮ್ಮದ್ ನಾಶಿಪುಡಿ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ವೇಳೆ ಅಂದು ನ್ಯಾಯಾಧೀಶರ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಿದ್ದು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿ ಎಂದು ಆದೇಶ ಹೊರಡಿಸಲಾಗಿತ್ತು. ಅದರಂತೆ ಇಂದು ಕಸ್ಟಡಿ ಅವಧಿ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟಿಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆಯ ‘ಮಹಾ ಶಿವರಾತ್ರಿ’ಯಂದು ‘ಈ ಮಂತ್ರ’ವನ್ನು ಪಠಿಸಿ: ನಿಮ್ಮ ‘ಎಲ್ಲಾ ಕಷ್ಟ’ಗಳು ದೂರ
ಇದೆ ವೇಳೆ ಮೊಹಮ್ಮದ್ ನಾಶಿಪುಡಿ ಹೇಳಿಕೆಯನ್ನು ನೀಡಿದ್ದು ಜೋಶ್ ನಲ್ಲಿ ಜಿಂದಾಬಾದ್ ಹೋಗಿದ್ದು ನಿಜ ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಸನ್ಮಾನ ಮಾಡಲು ಬರಬಾರದಿತ್ತು ಸನ್ಮಾನ ಮಾಡಲು ಬಂದು ಜೈಲು ಸೇರುವ ಪರಿಸ್ಥಿತಿ ಬಂದಿದೆ ಎಂದು ನಾಶಪುಡಿ ಬೇಸರ ವ್ಯಕ್ತಪಡಿಸಿದ್ದಾನೆ.