ವಿಜಯಪುರ : ವಿಜಯಪುರದ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಒಬ್ಬರಿಂದ ಪಿಎಸಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ನೀಡಿರುವ ಘಟನೆ ಈಗ ಬೆಳಕಿಗೆ ಬಂದಿದೆ.
ದೇಶಕ್ಕೆ, ರೈತರಿಗೆ ಒಳ್ಳೆಯದಾಗಲಿ : ಮೋದಿ ಮತ್ತೊಮ್ಮೆ ‘ಪ್ರಧಾನಿ’ಯಾಗಲೆಂದು 102 ವರ್ಷದ ವೃದ್ಧೆಯಿಂದ ‘ಪಾದಯಾತ್ರೆ’
ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಪ್ರೊಫೆಸರ್ ಎಂ.ಎಲ್. ಮಲ್ಲಿಕಾರ್ಜುನ ಎನ್ನುವ ಪ್ರೊಫೆಸರ್ ಪಿ ಎಚ್ ಡಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
370 ನೇ ವಿಧಿಯ ನಂತರ ಶ್ರೀನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ: ಬಿಗಿ ಭದ್ರತೆ
ವಿಜಯಪುರ ನಗರದ ಹೊರಹಲಯದಲ್ಲಿರುವ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಈ ಆರೋಪ ಕೇಳಿ ಬಂದಿದೆ.ಮಹಿಳಾ ವಿಶ್ವವಿದ್ಯಾಲಯ ಮ್ಯಾನೇಜ್ಮೆಂಟ್ ವಿಭಾಗದ ಪ್ರೊಫೆಸರ್ ಎಂ. ಎಲ್ ಮಲ್ಲಿಕಾರ್ಜುನ್ ಪಿ ಎಚ್ ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಧಾರವಾಡ : ಮದುವೆ ಮಂಟಪದಲ್ಲಿ ’35 ಲಕ್ಷ’ ಮೌಲ್ಯದ ಚಿನ್ನಾಭರಣ ಕದ್ದ ಖದೀಮ : ಪ್ರಕರಣ ದಾಖಲು
ಮಹಿಳಾ ವಿಶ್ವವಿದ್ಯಾಲಯದ ಪ್ರೊಫೆಸರ್ ತುಳಸಿಮಾಲಾರಿಗೆ ಇದೀಗ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಫೆಬ್ರವರಿ 27ರಂದು PHD ವಿದ್ಯಾರ್ಥಿನಿ ಕುಲಪತಿಗೆ ದೂರು ನೀಡಿದ್ದಾರೆ.ವಿದ್ಯಾರ್ಥಿನಿ ನೀಡಿರುವ ದೂರನ್ನು ಇದಿಗ ಕುಲಪತಿ ಆಂತರಿಕ ದೂರು ಸಮಿತಿಗೆ ನೀಡಿದ್ದರೆ. ಕುಲಪತಿ ಯುಜಿಸಿ ನಿಯಮಗಳ ಪ್ರಕಾರ ಮಾಡಲಾಗಿರುವ ಆಂತರಿಕ ಸಮಿತಿ ಪ್ರೊಫೆಸರ್ ಮಲ್ಲಿಕಾರ್ಜುನ ಮೇಲಿನ ಆರೋಪಗಳ ಕುರಿತು ಇದೀಗ ವಿಚಾರಣೆ ನಡೆಯಲಿದೆ.
ಆದರೆ ಪಿ ಎಚ್ ಡಿ ವಿದ್ಯಾರ್ಥಿನಿ ದೂರು ನೀಡಿ ಹತ್ತು ದಿನ ಕಳೆದರೂ ಇನ್ನೂ ವಿಚಾರಣೆಗೆ ಇನ್ನೂ ಸಮಯ ನಿಗದಿಪಡಿಸದ ಆಂತರಿಕ ದೂರು ಸಮಿತಿ 2017 ರಿಂದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಮಲ್ಲಿಕಾರ್ಜುನ್ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.