ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಪ್ರಮುಖ ಆರೋಪಿಯಾದ ಮಹಮ್ಮದ್ ನಾಶಿಪುಡಿ ನಾಸಿರ್ ಹುಸೇನ್ ಅವರು ಗೆದ್ದಿದ್ದಕ್ಕೆ ಜೋಶ್ ನಲ್ಲಿ ಜಿಂದಾಬಾದ್ ಹೋಗಿದ್ದು ಸತ್ಯ ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ತಿಳಿಸಿದ್ದಾನೆ.
ಡಿಜಿಟಲ್ ದಾಖಲೆಗಳಲ್ಲಿ ಅರ್ಜಿದಾರರ ಹೆಸರನ್ನು ಮರೆಮಾಚಲು ಹೈಕೋರ್ಟ್ ಸೂಚನೆ
ಈಗಾಗಲೇ ಘಟನೆ ಕುರಿತಂತೆ ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಅವರನ್ನು ಬಂಧಿಸಿದ್ದಾರೆ. ಪಾಕ್ ಪರ ಘೋಷಣೆ ಕೂಗಿದವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಾಶಿಪುಡಿ ಹೇಳಿಕೆ ನೀಡಿದ್ದು, ನಾವು ಘೋಷಣೆ ಕೂಗಿಲ್ಲ ಎಂದು ನಾಶಿಪುಡಿ ಹೇಳುತ್ತಿದ್ದಾನೆ.
ಹರ್ಯಾಣದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಭಾರೀ ಪ್ರಮಾಣದ ವಂಚನೆ:Watch Video
ಫುಲ್ ಜೋಶ್ ನಲ್ಲಿ ಜಿಂದಾಬಾದ್ ಅಂದಿದ್ದ ಅಂತೂ ನಿಜ ಜಿಂದಾಬಾದ್ ಜಿಂದಾಬಾದ್ ಅಂತ ಜೈಕಾರ ಹಾಕಿದ್ದು ಸತ್ಯ ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಮೊಹಮ್ಮದ್ ನಾಶೀ ಪುಡಿ ತಿಳಿಸಿದ್ದಾನೆ. ಯಾಕಾದರೂ ಸನ್ಮಾನಿಸಲು ಬಂದೆವು ಎಂದು ಬೇಸರ ವ್ಯಕ್ತಪಡಿಸಿದ್ದಾನೆ. ಸನ್ಮಾನ ಮಾಡಲು ಬಂದು ಜೈಲು ಸೇರುವ ಸ್ಥಿತಿ ಬಂತು ಎಂದು ಮಹಮ್ಮದ್ ನಾಶಿಪುಡಿ ಇದೀಗ ಬೇಸರ ವ್ಯಕ್ತಪಡಿಸುತ್ತಿದ್ದಾನೆ.