ನವದೆಹಲಿ : ರಷ್ಯಾದ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ನಂತರ ಯೂಕ್ರೇನ್ ವಿರುದ್ಧದ ಯುದ್ಧ ದಲ್ಲಿ ನಿಯೋಜನೆ ಮಾಡಲಾಗಿದ್ದ ಹೈದರಾಬಾದ್‌ನ 30 ವರ್ಷದ ವ್ಯಕ್ತಿಯೊಬ್ಬ ಯುದ್ಧಭೂಮಿಯಲ್ಲಿ ಮೃತಪಟ್ಟಿದ್ದಾನೆಂದು ವರದಿಯಾಗಿದೆ. ಈತನನ್ನು ಮಹಮದ್ ಅಫ್ಘಾನ್ ಎಂದು ಗುರುತಿಸಲಾಗಿದೆ.
ಈತ ಹೇಗೆ ರಷ್ಯಾದ ವಂಚನೆಯ ಬಲೆಗೆ ಬಿದ್ದನೆಂಬುದು ಗೊತ್ತಿಲ್ಲ ಎಂಬುದಾಗಿ ಕುಟುಂಬಸ್ಥರು ಕೆಲವು ದಿನಗಳ ಹಿಂದೆ ಮಾಧ್ಯಮದವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದರೊಂದಿಗೆ, ರಷ್ಯಾ-ಯೂಕ್ರೇನ್ ಸಮರದಲ್ಲಿ ಈ ರೀತಿಯಾಗಿ ಬಲಿಯಾದವರ ಪಟ್ಟಿಗೆ ಇನ್ನೊಬ್ಬ ಭಾರತೀಯನ ಸೇರ್ಪಡೆಯಾದಂತಾಗಿದೆ.
‘ಲಾಡ್ಲೆ ಮಶಾಕ್’ ದರ್ಗಾ ವಿವಾದ ಕೇಸ್ : ‘ಶಿವರಾತ್ರಿ’ಯಂದು 15 ಜನರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ : ಹೈಕೋರ್ಟ್
ಅವರನ್ನು ವಂಚಿಸಲಾಗಿದೆ. ಅವರು ಮಾಸ್ಕೋದಲ್ಲಿ ಮಾತ್ರವೇ ಕೆಲಸ ಮಾಡಲಿದ್ದಾರೆ. ಎಂದು ಏಜೆಂಟ್ ಹೇಳಿದ್ದ. ಆದರೆ ಅವರಿಗೆ 15 ದಿನಗಳ ತರಬೇತಿ ನೀಡಿ ಯೂಕ್ರೇನ್‌ನಲ್ಲಿ ಬಿಟ್ಟು ಯುದ್ಧದಲ್ಲಿ ಭಾಗವಹಿಸುತ್ತಿರುವ ರಷ್ಯಾ ಯೋಧರೊಂದಿಗೆ ಉಳಿದುಕೊಳ್ಳುವಂತೆ ತಿಳಿಸಲಾಯಿತು ಎಂದು ಮೃತ ಅಫ್ಘಾನ್ ನ ಸೋದರ ಮಹಮದ್ ಇಮ್ರಾನ್ ಹೇಳಿದ್ದಾರೆ. ಅಫ್ಘಾನ್ ಕಳೆದ ವರ್ಷ ನವೆಂಬರ್‌ನಲ್ಲಿ ಮಾಸ್ಕೋಗೆ ತೆರಳಿದ್ದ.
BREAKING : ಧಾರವಾಡ ಪ್ರವೇಶಿಸಲು ‘ವಿನಯ್ ಕುಲಕರ್ಣಿ’ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ‘ಸುಪ್ರೀಂ ಕೋರ್ಟ್’
ಮಹಮದ್ ಅಫ್ಘಾನ್ ಹೈದ್ರಾಬಾಡಿನಲ್ಲಿ ಬಟ್ಟೆ ಶೋ ರೂಮ್ ನಲ್ಲಿ ಕೆಲಸ ಮದ್ದಿಕೊಂಡಿದ್ದ, ಈ ವೇಳೆ ರಷ್ಯಾದಲ್ಲಿ 45 ಸಾವಿರ ಸಂಬಳದ ಆಮಿಷವನ್ನು ಒಡ್ಡಲಾಗಿತ್ತು.ನಂತರ ಸಂಬಳವನ್ನು 1.5 ಲಕ್ಷಕ್ಕೆ ಏರಿಸಲಾಗಿತ್ತದೆ ಎಂದು ನಂಬಿಸಲಾಗಿತ್ತು.ಹೀಗಾಗಿ ಅಲ್ಲಿಗೆ ತೆರಳಿದ ಮಹಮದ್ ಅಫ್ಘಾನ್, ಕಳೆದ ಡಿಸೇಂಬರ್ 31 ರಂದು ಕುಟುಂಬಸ್ಥರಿಗೆ ವಿಡಿಯೋ cl ಮಾಡಿದ್ದ ಎನ್ನಲಾಗಿದೆ ಇದೀಗ ಯುದ್ಧಭೂಮಿಯಲ್ಲಿ ಸಾವನ್ನಪ್ಪಿರುವ ಘಟನೆ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ.