ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರಿಗೆ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೇ ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಉತ್ತರಿಸಿದ್ದು ನನಗೂ ಕೂಡ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿದೆ ಎಂದು ತಿಳಿಸಿದರು.
5,8,9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ!
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ ಉತ್ತರಿಸಿ, ಈ ಹಿಂದೆ ಕೂಡ ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಮೇಲೆ ಸಂದೇಶ ಬಂದಿತ್ತು.ಇಂತಹ ಕೇಸ್ ಗಳನ್ನು ಭೇದಿಸುವುದಕ್ಕೆ ಸ್ವಲ್ಪ ಕಷ್ಟ ಆಗುತ್ತದೆ ಎಂದರು.
ಪಾಕ್ ಪರ ಘೋಷಣೆ ತನಿಖೆ, ಬಂಧನ ಮಾಡದ ಬಿಜೆಪಿಗೆ ದೇಶದ ಬಗ್ಗೆ ಬದ್ಧತೆ ಇದೆಯಾ: ಡಿಸಿಎಂ ಡಿ.ಕೆ. ಶಿವಕುಮಾರ್
ಬೇರೆ ದೇಶದ ಏಜೆನ್ಸಿಗಳು ಸಪೋರ್ಟ್ ಮಾಡುತ್ತಿಲ್ಲ. ಫೇಸ್ಬುಕ್ ಗೂಗಲ್ ಅಂತ ಕಂಪನಿಗಳು ಸಹಕರಿಸುವುದಿಲ್ಲ.ಅಂತಹ ಕಂಪನಿ ಸಹಕರಿಸಿದರೆ ಸುಲಭವಾಗಿ ಕೇಸ್ ಅನ್ನು ಭೇದಿಸಬಹುದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದರು.
‘ಪಾಕಿಸ್ತಾನ’ ಪರ ಘೋಷಣೆ ಬಳಿಕ ಮತ್ತೊಂದು ವಿವಾದದ ಸುಳಿಯಲ್ಲಿ ರಾಜ್ಯಸಭಾ ಸದಸ್ಯ ‘ನಾಸಿರ್ ಹುಸೇನ್’
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಇ-ಮೇಲ್ ಸಂದೇಶ ಬಂದಿತ್ತು. ಈ ಕುರಿತಾಗಿ ಪೊಲೀಸರು ಇದೀಗ ಇಮೇಲ್ ಸಂದೇಶ ಎಲ್ಲಿಂದ ಬಂದಿದ್ದೆ ಯಾರು ಕಳುಹಿಸಿದ್ದಾರೆ ಎನ್ನುವುದರ ಕುರಿತು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಅಲ್ಲದೆ ಬೆಂಗಳೂರು ನಗರದಾದ್ಯಂತ ತೀವ್ರ ಕಟ್ಟೇಚ್ಚರ ವಹಿಸಲಾಗಿದೆ.