ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ ಗೆಲುವುದಾಕಲಿಸಿದ ಬಳಿಕ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು ಇಂದು ವಿಧಾನಸೌಧದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
US Election 2024: ಮೊದಲ ‘ಸೂಪರ್ ಮಂಗಳವಾರ’ ಪ್ರೈಮರಿ ಚುನಾವಣೆಯಲ್ಲಿ ಟ್ರಂಪ್ ಗೆ ಗೆಲುವು
ಆರೋಪಿಗಳಾದ ಮೊಹಮ್ಮದ್ ಶಫಿ ನಾಶಿಪುಡಿ, ಮುನಾವರ್ ಅಹಮದ್ ಹಾಗೂ ಮೊಹಮ್ಮದ್ ಇಲ್ತಾಜ್ ರನ್ನು ಕರೆದುಕೊಂಡು ಇಂದು ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ ಬೆಂಬಲಿಗರೆಂದು ಹೇಳಲಾಗುತ್ತಿರುವ ಮೂವರು ಆರೋಪಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ ಹಿನ್ನೆಲೆ ವಿಚಾರಣೆ ನಡೆಸುತ್ತಿರುವ ವಿಧಾನಸೌಧದ ಠಾಣೆ ಪೊಲೀಸರು, ಆರೋಪಿಗಳ ಪೂರ್ವಾಪರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆ : ಇಂದು ‘ಜೆ.ಪಿ ನಡ್ಡಾ’ ನೇತೃತ್ವದಲ್ಲಿ ಮಹತ್ವದ ಸಭೆ : ಅಭ್ಯರ್ಥಿಗಳ ಪಟ್ಟಿ ಅಂತಿಮ ಸಾಧ್ಯತೆ
ಈಗಾಗಲೇ ಆರೋಪಿಗಳ ಧ್ವನಿ ಪರೀಕ್ಷೆ ಕುರಿತಂತೆ ಎಫ್ ಎಸ್ ಎಲ್ ವರದಿಯಲ್ಲಿ ಬಂದಿದೆ.ಆದರೂ ಹೆಚ್ಚಿನ ಮಾಹಿತಿಗಾಗಿ ಅಹಮದಾಬಾದ್ FSL ಗೆ ಸ್ಯಾಂಪಲ್ ರವಾನಿಸಲಾಗಿದೆ. ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಿದ್ದು ಇಂದು ಸಂಜೆ ಪೊಲೀಸರು ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಬೆಂಗಳೂರು : ವಿಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ಆಮಿಷ : ಆರೋಪಿ ಕೈಗೆ ಕೋಳ ತೊಡಿಸಿದ ಖಾಕಿ
ಆರೋಪಿಗಳ ಹೇಳಿಕೆ ಹೊರತಾಗಿ ಮತ್ತಷ್ಟು ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ಆರೋಪಿಗಳ ಅವಶ್ಯಕತೆ ಇಲ್ಲದ ಕಾರಣ, ವೈಜ್ಞಾನಿಕ ಕಾರಣ ಜಗು ವೈಜ್ಞಾನಿಕ ವಿಚಾರಗಳು ಬಂದ ನಂತರ ಹೆಚ್ಚಿನ ತನಿಖೆಗೆ ನಿರ್ಧಾರಿಸಿದ್ದಾರೆ ಎಂದು ತಿಳಿದುಬಂದಿದೆ.