ಬೆಂಗಳೂರು : ಖದೀಮನೊಬ್ಬ ಅಮಾಯಕ ಜನರಿಗೆ ವಿಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದ್ದು ಇದೀಗ ಆತನನ್ನು ಬಂಧಿಸಲಾಗಿದೆ. ಬೆಂಗಳೂರಿನ ಸುಬ್ರಮಣ್ಯ ನಗರದ ಠಾಣೆ ಪೊಲೀಸರಿಂದ ಕಿಶನ್ ಎನ್ನುವ ಆರೋಪಿಯನ್ನು ಇದೀಗ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಸಲಹೆಗಳು ಹೀಗಿವೆ!
ವಂಚಕ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ನನ್ನು ನಂಬಿ ಜನರು ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಟ್ರೇಡಿಂಗ್ ಹೆಸರಿನಲ್ಲಿ ಕಿಶನ್ ಅಮಾಯಕರಿಗೆ ಬಲೇ ಬೀಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗುತ್ತಿದೆ.ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಲಾಭ ಜನರಿಗೆ ನಂಬಿಸುತ್ತಿದ್ದ ಎನ್ನಲಾಗುತ್ತಿದೆ.
BREAKING:ಉತ್ತರ ಪ್ರದೇಶದ ಎರಡು ಅಂತಸ್ತಿನ ವಸತಿ ಕಟ್ಟಡದಲ್ಲಿ ‘ಬೆಂಕಿ ಅವಘಡ’: ಐವರು ‘ಸಜೀವ ದಹನ’
ಗುಣನಿಧಿ ಎಂಬುವವರ ದೂರಿನ ಮೇರೆಗೆ ಇದೀಗ ಎಫ್ಐಆರ್ ದಾಖಲಾಗಿದೆ. 15.15 ಲಕ್ಷ ಹಣ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರು ನೀಡಲಾಗಿದ್ದು, ಸ್ನೇಹಿತ ಗೌತಮ್ ಮೂಲಕ ಕಿಶನ್ ಗುಣನಿಧಿಗೆ ಪರಿಚಯವಾಗಿದ್ದ ಎನ್ನಲಾಗಿದೆ. ಲೋನ್ಗಾಗಿ ಬ್ರೋಕರ್ ವೆಂಕಟೇಶ ಸಂಪರ್ಕಿಸಿಸುವಂತೆ ಕಿಶನ್ ತಿಳಿಸಿದ್ದ.ದಾಖಲೆ ಪಡೆದು ಬ್ಯಾಂಕ್ನಿಂದ ಲೋನ್ ಕೊಡಿಸಿದ ಬ್ರೋಕರ್ ವೆಂಕಟೇಶ್ ಲೋನ್ ಅಮೌಂಟ್ ಆರ್‌ಟಿಜಿಎಸ್ ಮೂಲಕ ಕಿಶನ್ ಅಕೌಂಟಿಗೆ ವರ್ಗಾವಣೆ ಆಗಿದೆ. ಬ್ಯಾಂಕ್ ಲೋನ್ ಇಎಂಐ ತಾನೇ ಪಾವತಿಸುವುದಾಗಿ ಕಿಶನ್ ನಂಬಿಸಿದ್ದ. ಮೊದಲ 5 ರಿಂದ 6 ಇಎಂಐ ಕಿಶನ್ ಪಾವತಿಸಿದ್ದ.
ಜೈಲಿನಲ್ಲಿ ‘LET’ ಉಗ್ರನ ‘ಜಿಹಾದಿ ಭೋದನ’ ಪ್ರಕರಣ : ‘NIA’ ದಾಳಿ ವೇಳೆ ಲ್ಯಾಪ್‌ಟಾಪ್, ಮೊಬೈಲ್, ಹಣ ಜಪ್ತಿ
ಒಂದೇ ವರ್ಷಕ್ಕೆ ಲೋನ್ ಕ್ಲಿಯರ್ ಮಾಡಿ ಪ್ರಾಫಿಟ್ ನೀಡುವ ಆಮಿಷ ಒಡ್ಡಿದ್ದ ಎಂದು ಹೇಳಲಾಗುತ್ತಿದೆ. ಇದೇ ರೀತಿಯಾಗಿ ನೂರಾರು ಜನರನ್ನು ಕಿಶನ್ ನಂಬಿಸಿ ವಂಚನೆ ಎಸಗಿದ್ದಾನೆ.ಸುಮಾರು 80 ರಿಂದ 100 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.ಹಣ ಹೂಡಿಕೆ ಮಾಡಿರುವ ಜನ ವಾಪಸ್ ಕೇಳಿದರೆ ಗನ್ ತೋರಿಸಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಕಿಂಗ್ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿರುವ ವಂಚಕ ಕಿಶನ್. ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಕೇಳಿದ ಜನರಿಗೆ ಗನ್ ತೋರಿಸಿ ಬೇಡರಿಸುತ್ತಿದ್ದಾನೆ. ಹೀಗಾಗಿ ಜೀವ ಭಯದಿಂದ ಹೂಡಿಕೆ ಮಾಡಿರುವ ಜನರು ದೂರು ನೀಡಲು ಹಿಂಜರಿಯುತ್ತಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಡಿಜೆಪಿ ಸೈದುಲ್ ಅಡಾವತ್ ಹೂಡಿಕೆ ಮಾಡಿರುವ ಜನರಿಗೆ ದೂರು ನೀಡಿ ಎಂದು ಮನವಿ ಮಾಡಿದ್ದಾರೆ.