ಕೋಲಾರ : ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಒಂದು ನಿರ್ಲಕ್ಷತೆಯಿಂದ ಕೋಲಾರ ತಾಲೂಕಿನ ಜಂಗಾಲಹಳ್ಳಿಯ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
‘ದೇಶದ್ರೋಹ ಕೆಲಸ’ದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ -ಡಿಸಿಎಂ ಡಿಕೆ ಶಿವಕುಮಾರ್
ಕೋಲಾರ ತಾಲೂಕಿನ ಜಂಗಾಲ ಹಳ್ಳಿಯ ಭವಾನಿ (26) ಎನ್ನುವ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.ಸೋಮವಾರ ಬೆಳಿಗ್ಗೆ ಹೆರಿಗೆಗೆ ಎಂದು ಭವಾನಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಸೋಮವಾರ ಸಂಜೆ ಬೆಳಿಗ್ಗೆ ಭವಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಆದರೆ ಮಧ್ಯರಾತ್ರಿ ಬಾಣಂತಿ ನೋವು ಎಂದಾಗ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ.ವೈದ್ಯರು ಇಂಜೆಕ್ಷನ್ ನೀಡಿದ ನಂತರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇಂಜೆಕ್ಷನ್ ನೀಡಿದ ಕೆಲ ಸಮಯದಲ್ಲೇ ಬಾಣಂತಿ ಸಾವನಪ್ಪಿದ್ದಾಳೆ ಎಂದು ಕೋಲಾರ ಜಿಲ್ಲಾ ಆಸ್ಪತ್ರೆ ವೈದ್ಯೆ ಡಾ. ಶಾಂತಾ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.ಇದೀಗ ಕೋಲಾರ ಟೌನ್ ಪೊಲೀಸ್ ಠಾಣೆಗೆ ವೈದ್ಯೆ ಡಾ.ಶಾಂತಾ ವಿರುದ್ಧ ದೂರು ದಾಖಲಾಗಿದೆ.